March 19, 2026

ಮಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದ
ಝೊಮ್ಯಾಟೊ ಡೆಲಿವರ್ ಗರ್ಲ್’ ಮೇಘನಾ ದಾಸ್ ನಿಧನ

0
image_editor_output_image538533379-1651254436328

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದ ಮಂಗಳೂರಿನ ‘ಝೊಮ್ಯಾಟೊ ಡೆಲಿವರ್ ಗರ್ಲ್’ ಮೇಘನಾ ದಾಸ್ ಶುಕ್ರವಾರ ಬೆಳಗ್ಗೆ ನಿಧನರಾದರು.

ಅವರಿಗೆ 36 ವರ್ಷ ವಯಸ್ಸಾಗಿತ್ತು. ಕೆಲ ಸಮಯದಿಂದ ಕಿಡ್ನಿ ರೋಗದಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.

2019ರಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಮಣ್ಣಗುಡ್ಡ ಪ್ರದೇಶದ ವಾರ್ಡ್ ಸಂಖ್ಯೆ 28ರಿಂದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿದ್ದರು. ಆ ಮೂಲಕ ದೇಶದ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಆದರೆ ಚುನಾವಣೆಯಲ್ಲಿ ಮತದಾರರು ಕೈ ಹಿಡಿಯದ ಕಾರಣ ಸೋಲನುಭವಿಸಿದ್ದರು.

ಮಂಗಳೂರಿನ ಉರ್ವ ನಿವಾಸಿಯಾಗಿದ್ದ ಇವರು, ಕೆಲ ಸಮಯದಿಂದ ಕಿಡ್ನಿಯ ಸಮಸ್ಯೆಗೆ ತುತ್ತಾಗಿದ್ದರು. ಆ ಬಳಿಕ ಉದ್ಯೋಗ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿ ‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌’ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರಿಗೆ ಮಾನವೀಯ ನೆರವು ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾದರೆಂದು ತಿಳಿದುಬಂದಿದೆ.

ಬಿಎ ಸಾಹಿತ್ಯ ಪದವಿ ಗಳಿಸಿದ್ದ ಮೇಘನಾ, ಝೊಮ್ಯಾಟೊ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿ ಸೇರುವುದಕ್ಕಿಂತ ಮೊದಲು ಬೆಂಗಳೂರಿನ ಎಂಎನ್‌ಸಿ ಹ್ಯಾವ್ಲೆಟ್ ಪ್ಯಾಕಾರ್ಡ್‌ನಲ್ಲಿ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ ಆಗಿದ್ದರು. ನಂತರ ದುಬೈನ ಕಂಪೆನಿಯೊಂದರಲ್ಲಿ ಮೆನೇಜರ್ ಆಗಿಯೂ ಕೆಲಸ ನಿರ್ವಹಿಸಿದ್ದರು. ಮೃತರು ತಾಯಿ, ಓರ್ವ ಮಗಳು, ಪತಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!