ವಿಟ್ಲ: ವೇಟ್ ಲಿಪ್ಟಿಂಗ್ ನಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ: ಸಾಧನೆಗೈದ ಸೈಂಟ್ ರೀಟಾ ಮತ್ತು ಜೇಸಿ ಶಾಲಾ ವಿದ್ಯಾರ್ಥಿಗಳ ವಿಟ್ಲ ಪೇಟೆಯಲ್ಲಿ ಮೆರವಣಿಗೆ ಮತ್ತು ಅಭಿನಂದನೆ
ವಿಟ್ಲ: ಸೈಂಟ್ ರೀಟಾ ಅಂಗ್ಲ ಮಾಧ್ಯಮ ಶಾಲೆ ವಿಟ್ಲ ಹಾಗೂ ವಿಠಲ ಜೇಸೀಸ್ ಅಂಗ್ಲ ಮಾಧ್ಯಮ ಶಾಲೆ ಇದರ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನೆ ಹಾಗೂ ಭವ್ಯ ಮರವಣಿಗೆ ಬುಧವಾರ ನಡೆಯಿತು.

ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸೈಂಟ್ ರೀಟಾ ಅಂಗ್ಲ ಮಾಧ್ಯಮ ಶಾಲೆ ವಿಟ್ಲ, ಹತ್ತನೇ ತರಗತಿ ವಿದ್ಯಾರ್ಥಿ ಗುರುಪ್ರೀತ್ ಹಾಗೂ ವಿಠಲ ಜೇಸೀಸ್ ಅಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ವಂದ್ಯಾ ಹಾಗೂ ರಾಜ್ಯಮಟ್ಟದಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದ ಸೈಂಟ್ ರೀಟಾ ಅಂಗ್ಲ ಮಾಧ್ಯಮ ಶಾಲೆ ವಿಟ್ಲ, ಇದರ ಒಂಬತ್ತನೇ ತರಗತಿ ವಿದ್ಯಾರ್ಥಿ ಬಿ.ವಿನೀತ್ ಕಮಾರ್ ಹಾಗೂ ವಿಠಲ ಜೇಸೀಸ್ ಅಂಗ್ಲ ಮಾಧ್ಯಮ ಶಾಲೆ , ಇದರ ಒಂಬತ್ತನೇ ತರಗತಿ ವಿದ್ಯಾರ್ಥಿ ಜಿತಿನ್ ಎಸ್. ಪೂಂಜ, ರಾಜ್ಯ ಮಟ್ಟದ ಜೋಡೋ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಧನ್ವಿ, ಹಾಗೂ ಸೈಂಟ್ ರೀಟಾ ಅಂಗ್ಲ ಮಾಧ್ಯಮ ಶಾಲೆ ವಿಟ್ಲ ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಸತ್ ನೌಫಿದ ತೃತೀಯ ಸ್ಥಾನ ಪಡೆದು ಸಾಧನೆಗೈದ ಈ ಸಾಧಕರನ್ನು ಅಭಿನಂದಿಸಲಾಯಿತು.
ಸಾಧಕರನ್ನು ಒಳಗೊಂಡಂತೆ ಭವ್ಯ ಮರವಣಿಗೆಯು ಜಂಟಿ ಶಾಲಾ ವಿದ್ಯಾರ್ಥಿಗಳೊಂದಿಗೆ ಶಾಲಾ ವಾದ್ಯಗೋಷ್ಠಿ, ಚೆಂಡೆಯ ನಾದದೊಂದಿಗೆ ಸೈಂಟ್ ರೀಟಾ ವಿದ್ಯಾಸಂಸ್ಥೆಯಿಂದ ವಿಟ್ಲ ಪೇಟೆ ಹಾಗೂ ಜೈನ ಬಸದಿ ವರೆಗೆ ಮರವಣಿಗೆ ವಿಜೃಂಭಣೆಯಾಗಿ ಸಾಗಿಬಂತು.
ಕಾರ್ಯಕ್ರಮದಲ್ಲಿ ವಿಠಲ ಜೇಸೀಸ್ ಅಂಗ್ಲ ಮಾಧ್ಯಮ ಶಾಲೆ ಇದರ ಅಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಲೇರಿಯನ್ ವೇಗಸ್, ಜಂಟಿ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ ಅಮಿತ್ ಪ್ರಕಾಶ್ ರೋಡ್ರಿಗಸ್, ಹಾಗೂ ಜಯರಾಯ್ ರೈ, ಸಿ.ಮರೀನಾ ಉಪಸ್ಥಿತರಿದ್ದರು.




