March 19, 2026

ಓದುವಂತೆ ಬುದ್ಧಿಮಾತು ಹೇಳಿದ ಪೋಷಕರು: ಕೋಪಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು

0
image_editor_output_image-1459195289-1651276913183.jpg

ಹಾವೇರಿ: ಓದುವಂತೆ ಬುದ್ದಿಮಾತು ಹೇಳಿದ್ದಕ್ಕೆ ಕೋಪಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ತಾಲೂಕಿನ ಗುತ್ತಲ ಸಮೀಪದ ಹೊಸಮೇಲ್ಮುರಿಯದಲ್ಲಿ ಶುಕ್ರವಾರ ನಡೆದಿದೆ.

ಪಕ್ಕಿರೇಶ ಸುರೇಶ ಅರಳಿ (18) ಮೃತ ವಿದ್ಯಾರ್ಥಿ. ಗುರುವಾರ ಪರೀಕ್ಷೆ ಬರೆದಿದ್ದ ಈತ ಆ ದಿನ ಓದದೇ ಸುಮ್ಮನೇ ಕಾಲಹರಣ ಮಾಡುತ್ತಿದ್ದ. ಇದರಿಂದ ಓದುವಂತೆ ಪೋಷಕರು ಬುದ್ದಿವಾದ ಹೇಳಿದ್ದಾರೆ. ಆದರೆ ಇದರಿಂದ ನೊಂದ ವಿದ್ಯಾರ್ಥಿ ಹೊಲದಲ್ಲಿನ ರೇಷ್ಮೆ ಮನೆಯಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಗುತ್ತಲ ಠಾಣೆಯ ಪಿಎಸ್ಐ ಜಗದೀಶ್ ಜಿ. ಹಾಗೂ ಸಿಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!