73 ಲಕ್ಷ ರೂ. ಪಡೆದು ವಂಚನೆ: ‘ಕಮಲಿ’ ಧಾರಾವಾಹಿಯ ನಿರ್ದೇಶಕನ ಬಂದನ
ಬೆಂಗಳೂರು: ‘ಕಮಲಿ’ ಧಾರಾವಾಹಿ ನಿರ್ಮಾಣಕ್ಕೆ ₹ 73 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
‘ನಿರ್ಮಾಪಕ ರೋಹಿತ್ ಅವರು ಇತ್ತೀಚೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅರವಿಂದ್ ಕೌಶಿಕ್‌ನನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬಂಧಿತ ಅರವಿಂದ್, ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ‘ಕಮಲಿ’ ಧಾರಾವಾಹಿ ನಿರ್ದೇಶಕ. ‘ಹುಲಿರಾಯ’, ‘ನಮ್ಮ ಏರಿಯಾದಲ್ಲಿ ಒಂದು ದಿನ’ ಹಾಗೂ ‘ಶಾರ್ದುಲಾ’ ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು’ ಎಂದೂ ತಿಳಿಸಿದರು




