February 1, 2026

ನ್ಯೂಯಾರ್ಕ್‌: ಕೇರಳ ಮೂಲದ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು

0
images-78.jpeg

ನ್ಯೂಯಾರ್ಕ್‌: ಕೇರಳ ಮೂಲದ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕ್ಲಿಂಟನ್‌ ಜಿ. ಅಜಿತ್‌ (18) ಎಂದು ಗುರುತಿಸಲಾಗಿದೆ.

ಮಿಲ್ಫೋರ್ಡ್‌ನ ಕೆರೆ ಸಮೀಪದಲ್ಲಿ ಫುಟ್‌ಬಾಲ್ ಆಟವಾಡುತ್ತಿದ್ದಾಗ ಫುಟ್‌ಬಾಲ್‌ ನೀರಿಗೆ ಬಿದ್ದಿತು. ಹೀಗಾಗಿ ಕೆರೆಯಲ್ಲಿ ಬಿದ್ದಿದ್ದ ಫುಟ್‌ಬಾಲ್‌ನ್ನು ಎತ್ತಿಕೊಳ್ಳಲು ಆತ ನೀರಿಗೆ ಇಳಿದಿದ್ದಾನೆ. ಈ ವೇಳೆ ನೀರಿನಲ್ಲಿ ಮುಳುಗಿದ್ದು, ಈಜಲು ಸಾಧ್ಯವಾಗದ ಕಾರಣ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಕಳೆದ ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!