ತಮಿಳುನಾಡಿನ ಖ್ಯಾತ ವಾಗ್ಮಿ,ಹೋರಾಟಗಾರ್ತಿ ಟೀಚರ್ ಶಬರಿಮಾಲಾ ಇಸ್ಲಾಂ ಧರ್ಮ ಸ್ವೀಕಾರ
ಚೆನ್ನೈ: ತಮಿಳುನಾಡಿನ ಖ್ಯಾತ ವಾಗ್ಮಿ, ಸಾಮಾಜಿಕ ಹೋರಾಟಗಾರ್ತಿ ಟೀಚರ್ ಶಬರಿಮಲಾ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು, ಮಕ್ಕಾದಲ್ಲಿ ಈಗ ಉಮ್ರಾ ಕಾರ್ಯ ನೆರವೇರಿಸಿದ್ದಾರೆ.
ಇಸ್ಲಾಂ ಧರ್ಮ ಸ್ವೀಕಾರದ ಬಳಿಕ ಟೀಚರ್ ಶಬರಿಮಲಾ ಫಾತಿಮಾ ಎಂದು ಹೆಸರನ್ನು ಮರುನಾಮಕರಣ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಯಾಕೆ ಮುಸ್ಲಿಮರ ಮೇಲೆ ಭಾರೀ ಅಕ್ರಮ ನಡೆಯುತ್ತಿದೆ ಎಂದು ನಾನು ಯೋಚಿಸಿದೆ. ಬಳಿಕ ನಾನು ಏಕಾಂಗಿಯಾಗಿ ಇಸ್ಲಾಂ ಬಗ್ಗೆ ಅಧ್ಯಯನ ನಡೆಸಿದೆ. ಬಳಿಕ ನನಗೆ ಇಸ್ಲಾಂ ಬಗ್ಗೆ ಮನವರಿಕೆಯಾಗಿದೆ. ನಾನು ಶಾಂತಿಯ ಧರ್ಮ ಇಸ್ಲಾಂನ್ನು ನನಗಿಂತ ಹೆಚ್ಚು ಪ್ರೀತಿಸುತ್ತೇನೆ. ನಿಮ್ಮಮನೆಯಲ್ಲಿ ಅದ್ಭುತವಾದ ಕುರ್ ಆನ್ ಬಚ್ಚಿಡಲಾಗಿದೆ.ಅದನ್ನು ಜಗತ್ತಿಗೆ ಸಾರಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಶಬರಿಮಾಲಾ ಅವರು ಮಾಜಿ ಸರಕಾರಿ ಶಿಕ್ಷಕಿ. ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೋರ್ವಳು ಸೀಟ್ ಸಿಗದೆ ಆತ್ಮಹತ್ಯೆ ಮಾಡಿಕೊಂಡಾಗ ಪ್ರತಿಭಟಿಸಿ ತಮ್ಮ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಧುಮುಕಿದ್ದರು.




