February 2, 2026

ಕಣ್ಣೂರು: ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಯುವಕ ಮೃತ್ಯು

0
IMG-20220424-WA0007.jpg

ಕಣ್ಣೂರು: ಟ್ಯಾಂಕರ್ ಲಾರಿ ನಿಯಂತ್ರಣ ಕಳೆದುಕೊಂಡು ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತನನ್ನು ಹ್ಯಾರಿಸ್ (25) ಎಂದು ಗುರುತಿಸಲಾಗಿದೆ.

ಟ್ಯಾಂಕರ್ ಲಾರಿ ಮಂಗಳೂರಿನಿಂದ ಅಡುಗೆ ಅನಿಲವನ್ನು ಸಾಗಿಸುತ್ತಿತ್ತು. ಕಣ್ಣೂರು ಗ್ರಾಮದ ಹ್ಯಾರಿಸ್ ಅಂಗಡಿ ಬಳಿಯ ರಸ್ತೆ ಬದಿಯಿಂದ ಫೋನ್ ಕರೆ ಮಾಡುತ್ತಿದ್ದಾಗ ಲಾರಿ ಅವರಿಗೆ ಡಿಕ್ಕಿ ಹೊಡೆದಿದೆ. ಲಾರಿ ವೇಗವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಅಂಗಡಿ ಸಂಪೂರ್ಣವಾಗಿ ನಾಶವಾಗಿದೆ.

Leave a Reply

Your email address will not be published. Required fields are marked *

error: Content is protected !!