ಬಂಟ್ವಾಳ ತಾಲೂಕಿನಲ್ಲಿ ಮಳೆಗೆ ಅಪಾರ ಹಾನಿ
ಬಂಟ್ವಾಳ: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಗಾಳಿ–ಮಳೆಯಿಂದಾಗಿ ಕೆಲವೆಡೆ ಮನೆಗಳಿಗೆ ಹಾನಿ ಉಂಟಾಗಿದೆ.
ಇಲ್ಲಿನ ಅಮ್ಟಾಡಿ ಗ್ರಾಮದ ಅಜೆಕಲ ಎಂಬಲ್ಲಿ ಚಂದ್ರಶೇಖರ ಬಾಬು ಶೆಟ್ಟಿ ಎಂಬುವರ ಮನೆಗೆ ಮರ ಬಿದ್ದ ಪರಿಣಾಮ ಹಾನಿಗೀಡಾಗಿದೆ.
ವಿಟ್ಲ ಕಸಬಾ ಗ್ರಾಮದ ಅಲಂಕಾರು ಎಂಬಲ್ಲಿ ವನಜಾ ಗಿರೀಶ ಎಂಬುವರ ಮನೆಗೆ ಹಾನಿಯಾಗಿದ್ದು, ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಸೀತಾ ರಮೇಶ ನಾಯ್ಕ ಎಂಬುವರ ಮನೆಗೂ ಮರ ಬಿದ್ದು ಹಾನಿಯಾಗಿದೆ. ಗೋಳ್ತಮಜಲು ಗ್ರಾಮದ ಪುರುಷೋತ್ತಮ ಎಂಬುವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದ್ದು, ಕೇಪು ಗ್ರಾಮದ ಕುಕ್ಕೆಬೆಟ್ಟು ಎಂಬಲ್ಲಿ ನಾರಾಯಣ ಅಜಿಲ ಎಂಬವರ ಮನೆ ಭಾಗಶಃ ಹಾನಿಗೀಡಾಗಿದೆ.




