February 2, 2026

ನೌಕೆ ಮೊಸ್ಕ್ವಾ ದ ಮೇಲೆ ಅಗ್ನಿ ಅವಘಡ: ಒಬ್ಬ ಸೈನಿಕ ಸಾವು: 27 ಮಂದಿ ನಾಪತ್ತೆ

0
image_editor_output_image210423798-1650757127162

ಮಾಸ್ಕೋ: ಕಳೆದ ವಾರ ಸಂಭವಿಸಿದ್ದ ರಷ್ಯಾದ ಪ್ರಮುಖ ನೌಕೆ ಮೊಸ್ಕ್ವಾ ದ ಮೇಲೆ ಕ್ಷಿಪಣಿ ದಾಳಿಯ ಬಳಿಕ ನಡೆದ ಅಗ್ನಿ ಅವಘಡದಲ್ಲಿ ಒಬ್ಬ ಸೈನಿಕ ಸಾವನ್ನಪ್ಪಿದ್ದು27 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 396 ಮಂದಿಯನ್ನು ರಕ್ಷಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಹಡಗು ಮುಳುಗಿದ ಒಂದು ವಾರದ ನಂತರ ಈ ಹೇಳಿಕೆ ಹೊರಬಿದ್ದಿದೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ, ಹಡಗಿನ ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹಡಗಿನಲ್ಲಿ ಸುಮಾರು 500 ಜನರು ಇದ್ದರು ಎಂದು ವ್ಯತಿರಿಕ್ತ ವರದಿಗಳಿಗೆ ಸಚಿವಾಲಯ ಯಾವುದೇ ವಿವರಣೆಯನ್ನು ನೀಡಲಿಲ್ಲಈ ನಡುವೆ ಕ್ರೂಸರ್‌ ಮೇಲೆ ನಾವೇ ಕ್ಷಿಪಣಿ ದಾಳಿ ನಡೆಸಿದ್ದಾಗಿ ಉಕ್ರೇನ್ ಹೇಳಿದೆ.

ಹಡಗಿನಲ್ಲಿ ಯುದ್ಧಸಾಮಗ್ರಿಗಳು, ಫಿರಂಗಿಗಳು, ಕ್ಷಿಪಣಿಗಳು, ಪ್ರೊಪಲ್ಷನ್ ಪ್ಲಾಂಟ್ ಮತ್ತು ಸಾಕಷ್ಟು ಇಂಧನಗಳು ಇದ್ದವು ಎಂದು ಅಮೇರಿಕಾದ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಆರೋಪಿಸಿದೆ.

Leave a Reply

Your email address will not be published. Required fields are marked *

error: Content is protected !!