June 13, 2026

ಸುಳ್ಯ ಲಾರಿಯಡಿಗೆ ಬಿದ್ದು ಯುವಕ ಗಂಭೀರ ಗಾಯ: ಆತ್ಮಹತ್ಯೆಗೆ ಯತ್ನ ಶಂಕೆ

0
IMG-20220420-WA0030

ಸುಳ್ಯ ನಗರದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ತೆಂಗಿನಕಾಯಿ ತುಂಬಿಸಿಕೊಂಡು ಬರುತ್ತಿದ್ದ ಲಾರಿಯಡಿಗೆ ರಸ್ತೆ ದಾಟುತ್ತಿದ್ದ ಯುವಕ ಬಿದ್ದು ಗಂಭೀರ ಗಾಯಗೊಂಡ ಘಟನೆ ಇದೀಗ ಸುಳ್ಯದಿಂದ ವರದಿಯಾಗಿದೆ.
ಗಂಭೀರ ಗಾಯಗೊಂಡ ಯುವಕನನ್ನು ಸ್ಥಳೀಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಆತ ಲಾರಿಯಡಿಗೆ ಜಿಗಿಯುತ್ತಿರುವ ವಿಡಿಯೋ ಚಿತ್ರ ಸಿಸಿ ಕ್ಯಾಮೆರಾ ಫುಟೆಜೆ ನಿಂದ ದೊರಕಿದೆ.ಈ ವಿಡಿಯೋದಲ್ಲಿ ಆತ ಲಾರಿಯಡಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!