ಸ್ವಿಫ್ಟ್, ಇಂಡಿಕಾ ಕಾರುಗಳ ಮಧ್ಯೆ ಅಪಘಾತ: ಮೂವರು ಸ್ಥಳದಲ್ಲಿಯೇ ಸಾವು
ಹಟ್ಟಿಚಿನ್ನದಗಣಿ: ಸಮೀಪದ ಗೊಲಪಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ಬಳಿ ಸ್ವಿಫ್ಟ್ ಹಾಗೂ ಇಂಡಿಕಾ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತರು ಅಮರೇಶ(30), ಗೋವಿಂದ(35), ರಾಜು(33) ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ವಡಗೇರಿಗೆ ತೆರಳುತ್ತಿದ್ದ ಇಂಡಿಕಾ ಕಾರು ಮತ್ತು ಗುಲ್ಬರ್ಗಾದಿಂದ ಲಿಂಗಸುಗೂರು ಮಾರ್ಗವಾಗಿ ತೆರಳುತ್ತಿದ್ದ ಸ್ವಿಫ್ಟ್ ಕಾರ್ ಮಧ್ಯೆ ಅಪಘಾತ ಸಂಭವಿಸಿದೆ. ಇಂಡಿಕಾ ಕಾರಿನಲ್ಲಿದ್ದ ಐವರ ಪೈಕಿ ಮೂವರು ಮೃತಪಟ್ಟಿದ್ದಾರೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




