ರಸ್ತೆ ದುರಸ್ತಿಯ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಶಾಸಕ
ತುಮಕೂರು: ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪರಿಂದ ಅವರು ರಸ್ತೆ ದುರಸ್ತಿಯ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬುಧವಾರ ಬೆಳಗ್ಗೆ ತಾಲ್ಲೂಕು ಆಡಳಿತ ಕಛೇರಿ ಆವರಣದಲ್ಲಿ ಈ ಘಟನೆ ನಡೆದಿದ್ದು, ಶಾಸಕರು ಕಪಾಳಮೋಕ್ಷ ಆಗಿರೋ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ನಾಗಲಮಡಿಕೆ ಹೋಬಳಿಯ ಹುಸೇನ್ ಪುರದ ನಾಗೇನಹಳ್ಳಿ ನಿವಾಸಿ ನರಸಿಂಹ ಮೂರ್ತಿ, ”ನಮ್ಮೂರಿಗೆ ರಸ್ತೆ ಇಲ್ಲ, ಹದಗೆಟ್ಟೋಗಿದೆ ಸ್ವಾಮಿ, ನಮ್ಮ ಕಡೆ ಕೆಲ ನಾಯಕರು ಕಿವಿಗೊಡುತಿಲ್ಲ ತಾವಾದರೂ ರಸ್ತೆ ಹಾಕಿಸಿ, ಸಾರಿಗೆ ಒದಗಿಸಿ,” ಎಂದು ಮನವಿ ಮಾಡಿದ. ಹೀಗೆ ಮನವಿ ಮಾಡಿದ್ದೆ ತಡ ಕೆರಳಿದ ಶಾಸಕ ವೆಂಕಟರಮಣಪ್ಪ ಯುವಕ ಕೆನ್ನೆಗೆ ಬಾರಿಸಿ ದರ್ಪ ತೋರಿದ್ದಾರೆ.




