April 5, 2025

ಜಿ20 ಶೃಂಗಸಭೆಯ ಮುನ್ನ ಪೋಪ್ ಫ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

0

ಇಟಲಿ: ಬಹು ನಿರೀಕ್ಷಿತ ಗ್ರೂಪ್ ಆಫ್ 20 (ಜಿ20) ಶೃಂಗಸಭೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು.

ಇನ್ನು ಮಧ್ಯಾಹ್ನ 12 ಗಂಟೆಗೆ ಜಿ-20 ಶೃಂಗಸಭೆ ಆರಂಭವಾಗಿದ್ದು, ಪ್ರಧಾನಿ ಮೋದಿಯವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ (ಇಎಎಂ) ಡಾ ಎಸ್ ಜೈಶಂಕರ್ ಇದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಪ್ರಧಾನಿ ಮೋದಿ ಮತ್ತು ಪೋಪ್ ನಡುವಿನ ಸಭೆಗೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿ ಇಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಶುಕ್ರವಾರ ಇಟಲಿಗೆ ಆಗಮಿಸಿದರು. ಈ ಶೃಂಗಸಭೆಯು ಪ್ರಧಾನಿ ಭಾಗವಹಿಸುವ ಎಂಟನೇ ಜಿ20 ಶೃಂಗಸಭೆಯಾಗಿದೆ.

 

 

Leave a Reply

Your email address will not be published. Required fields are marked *

You may have missed

error: Content is protected !!