ವಿಟ್ಲದಲ್ಲಿ ಸ್ವಚ್ಛ ಭಾರತ ಆಂದೋಲನದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ದ.ಕ ಜಿಲ್ಲಾಡಳಿತ, ವಿಟ್ಲ ಪಟ್ಟಣ ಪಂಚಾಯಿತಿ ಮತ್ತು ಲಯನ್ಸ್ ಕ್ಲಬ್ ವಿಟ್ಲ ಸಂಯುಕ್ತ ಆಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಸ್ವಚ್ಛ ಭಾರತ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ವಿಟ್ಲ ಪೇಟೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಸಲಾಯಿತು.
ವಿಟ್ಲ ಜೈನ ಬಸದಿಯಿಂದ ಹೊರಟು ವಿಟ್ಲ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಕೋಶಾಧಿಕಾರಿ ಗಂಗಾಧರ್ ಮತ್ತು ಇತರ ಸದಸ್ಯರು ಭಾಗವಹಿಸಿದ್ದರು. ಲಯನ್ಸ್ ಜಿಲ್ಲಾ ಪ್ರಾಂತೀಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪ್ರತಿಜ್ಙಾವಿಧಿ ನೆರವೇರಿಸಿದರು.
