March 24, 2026

ಹುಬ್ಬಳ್ಳಿ: ಉದ್ವಿಗ್ನ ಪರಿಸ್ಥಿತಿ, ಪೊಲೀಸ್ ಜೀಪು ಮತ್ತು ಇತರ ವಾಹನಗಳ ಮೇಲೆ ಕಲ್ಲು ತೂರಾಟ: ನಗರದಲ್ಲಿ 144 ಸೆಕ್ಷನ್ ಜಾರಿ

0
image_editor_output_image-356578746-1650152946085

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಜೀಪ್ ಸೇರಿ ಹಲವು ವಾಹನಗಳಿಗೆ ಕಲ್ಲು‌ತೂರಾಟ ನಡೆಸಲಾಗಿದೆ.

ಆನಂದ ನಗರ ಘೋಡಕೆ‌ ನಿವಾಸಿ
ಮಸೀದಿ ಮೇಲೆ ಭಗವಾಧ್ವಜ ಹಾರಿಸಿದಂಥ ವಿಡಿಯೋ‌ ಫೇಸ್ ಬುಕ್ ಸ್ಟೇಟಸ್​​ ಹಾಕಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಠಾಣೆ ಬಳಿ ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಈ ವೇಳೆ ಠಾಣೆ ಬಳಿ ಜಮಾಯಿಸಿದ ಒಂದು ಸಮುದಾಯದ ಜನರು ಕಲ್ಲುತೂರಾಟ ನಡೆಸಿದ್ದು, ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಅಶ್ರವಾಯು ಸಿಡಿಸುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರು ಪೊಲೀಸರು ಗಾಯಗಳಾಗಿವೆ, ಇತರ ಕೆಲವರಿಗೆ ಗಾಯಗಳ ‌ಬಗ್ಗೆ ಮಾಹಿತಿ ಇದೆ. ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದೆ‌.

Leave a Reply

Your email address will not be published. Required fields are marked *

error: Content is protected !!