March 24, 2026

ಚಾರ್ಮಾಡಿಯಲ್ಲಿ ಸರ್ಕಾರಿ ಬಸ್ – ಕಾರು ಅಪಘಾತ : ಮೂವರಿಗೆ ಗಂಭೀರ ಗಾಯ..!

0
image_editor_output_image1999871675-1650127627316.png

ಬೆಳ್ತಂಗಡಿ: ದಕ್ಷಿಣ ಕನ್ನಡದ ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಕಾರಿಗೆ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿದ್ದವರು ಹುಬ್ಬಳಿಯ ಮೂಲದವರು ಎನ್ನಲಾಗಿದೆ ರಜೆ ಇದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇತರ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ವಾಪಸ್ ಹುಬ್ಬಳಿ ಕಡೆ ಹೋಗುತ್ತಿದ್ದಾಗ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ಮೂಡಿಗೆರೆಯಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ.
ಈ ವೇಳೆ ಕಾರು ಸಂಪೂರ್ಣ ಜಖಂಗೊಂಡಿದ್ದು ,ಬಸ್ ಚರಂಡಿಗೆ ಹೋಗಿದೆ,

ಕಾರಿನಲ್ಲಿದ್ದ ಮೂವರಾದ ಚಾಲಕ ಪ್ರತೀಕ್(30) , ಪತಿ ರಾಜೇಶ್ ಬೆಳ್ಳಿವರಿ (44) ,ಪತ್ನಿ ಸ್ವಂತಿಕಾ ಬೆಳ್ಳಿವರಿ(35) ಗಾಯವಾಗಿದ್ದು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!