March 24, 2026

ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೆಂಕಿ ಅವಘಡ: ಲಕ್ಷಾಂತರ ರೂ. ನಷ್ಟ

0
image_editor_output_image636725982-1650171138076

ಮಣಿಪಾಲ:  ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವೆಷ್ಟೇಕ್ ಎಂಟರ್ಪ್ರೈಸಸ್ ನಲ್ಲಿ ಶನಿವಾರ ರಾತ್ರಿ ಅಗ್ನಿ ದುರಂತ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಭಸ್ಮವಾಗಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅವಘಡ ರಾತ್ರಿ ಹೊತ್ತು ಸಂಭವಿಸಿದ್ದರಿಂದ ಸಂಸ್ಥೆಯಲ್ಲಿ ಕೆಲಸಗಾರರು ಯಾರೂ ಇರಲಿಲ್ಲ. ಹೀಗಾಗಿ ಜೀವಹಾನಿ ತಪ್ಪಿದೆ. ಆದರೆ ಸಂಸ್ಥೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿಯ ಕೆನ್ನಾಲಿಗೆ ಆಗಸದೆತ್ತರಕ್ಕೆ ಹಬ್ಬಿದ್ದು, ವಿಷಯ ತಿಳಿದ ತತ್‌ಕ್ಷಣ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿದ್ದಾರೆ. ಮುಂಜಾನೆಯವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಇಡೀ ಫ್ಯಾಕ್ಟರಿಗೆ ವ್ಯಾಪಿಸಿದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬಂದಿ ಹರಸಾಹಸ ಪಡಬೇಕಾಯಿತು.

Leave a Reply

Your email address will not be published. Required fields are marked *

error: Content is protected !!