ಗದಗ: ಸಂಘಪರಿವಾರ ಕಾರ್ಯಕರ್ತರಿಂದ ಯುವಕನೋರ್ವನ ಬರ್ಬರ ಕೊಲೆ
ಗದಗ: ಯುವಕನೋರ್ವನನ್ನು ಹಳೇ ದ್ವೇಷಕ್ಕೆ ಸಂಬಂಧಿಸಿ ಬಜರಂಗದಳದ ಕಾರ್ಯಕರ್ತರು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.
ಬೆಟಗೇರಿಯ ಮಂಜುನಾಥ ನಗರದಲ್ಲಿ ಗಜೇಂದ್ರಸಿಂಗ್ ಎಂಬಾತನಿಗೆ ಬಜರಂಗದಳದ ಕಾರ್ಯಕರ್ತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆಂದು ಮೃತನ ತಂದೆ ಕಿಶನ್ ಸಿಂಗ್ ಆರೋಪಿಸಿದ್ದಾರೆ.
ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಜೇಂದ್ರ ಸಿಂಗ್ ನಿಗೆ ರೌಡಿಶೀಟರ್ ಶಿವರಾಜ್ ಪೂಜಾರ್ ಮತ್ತು ಆತನ ಸಹಚರರು ಚೂರಿಯಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಜೇಂದ್ರನಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.





