August 20, 2026

ಅಂಜನಾದ್ರಿಗೆ ಆಗಮಿಸಿದ್ದ ಮುಂಬೈ ಮೂಲದ ಪ್ರವಾಸಿ ಮೆಟ್ಟಿಲುಗಳ ಹತ್ತುವಾಗ ಮೃತ್ಯು

0
image_editor_output_image1753357763-1650063675592.jpg

ಗಂಗಾವತಿ: ಅಂಜನಾದ್ರಿಗೆ ಆಗಮಿಸಿದ್ದ ಮುಂಬೈ ಮೂಲದ ಪ್ರವಾಸಿಗನೊಬ್ಬ ಮೆಟ್ಟಿಲುಗಳ ಹತ್ತುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಜರುಗಿದೆ.

ಮುಂಬೈ ಮೂಲದ ಹಿಮಾಂಶು ಭಾಟಿಯಾ(34) ಎಂಬ ಪ್ರವಾಸಿಗ ಶುಕ್ರವಾರ ಮಧ್ಯಾಹ್ನ ಅಂಜನಾದ್ರಿ ವೀಕ್ಷಣೆ ಮಾಡಲು ಆಗಮಿಸಿ ಅಂಜನಾದ್ರಿಯ ಮೆಟ್ಟಿಲು ಏರುವಾಗ ಮಾರ್ಗಮಧ್ಯೆ ಎದೆ ನೋವಿನಿಂದ ಬಳಲಿ ಕುಸಿದು ಬಿದ್ದಿದ್ದು ಕೂಡಲೇ ಅವನ ಸ್ನೇಹಿತರು ಆನೆಗುಂದಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಆನೆಗೊಂದಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಹೃದಯಾಘಾತಕ್ಕೆ ಒಳಗಾಗಿದ್ದ ಹಿಮಾಂಶು ಪಾಂಡ್ಯ ಅವರಿಗೆ ಸರಿಯಾದ ಚಿಕಿತ್ಸೆ ದೊರಕದೆ ಇರುವುದಕ್ಕೆ ಅವರ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!