August 20, 2026

ಮುಸ್ಲಿಮರ ಎರಡು ಮನೆಗಳಿಗೆ ಬೆಂಕಿ ಹಚ್ಚಿದ ಸಂಘ ಪರಿವಾರದ ಕಾರ್ಯಕರ್ತರು: ಎಂಟು ಮಂದಿಯ ಬಂಧನ

0
Screenshot_2022-04-16-04-36-13-29_680d03679600f7af0b4c700c6b270fe7.jpg

ಆಗ್ರಾ: ಹಿಂದೂ ಮಹಿಳೆಯನ್ನು ಅಪಹರಿಸಿದ ಆರೋಪಕ್ಕೊಳಗಾದ ಮುಸ್ಲಿಂ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಸಂಘ ಪರಿವಾರದ ಕಾರ್ಯಕರ್ತರು ಶುಕ್ರವಾರ ಬೆಂಕಿ ಹಚ್ಚಿದ್ದಾರೆ.  ಗುಂಪು ದಾಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಧರ್ಮ ಜಾಗರಣ ಸಮನ್ವಯ ಸಂಘದ ಸದಸ್ಯರು ಎನ್ನಲಾಗಿದೆ. ನಿರ್ಲಕ್ಷ್ಯಕ್ಕಾಗಿ ಠಾಣಾ ಉಸ್ತುವಾರಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸ್ಥಳೀಯ ಠಾಣಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಜೀಮ್ ಮಾಲೀಕ ಸಾಜಿದ್ ವಾಸಿಸುತ್ತಿದ್ದ ರುನಾಕ್ಟಾ ಪ್ರದೇಶದಲ್ಲಿದ್ದ ಮನೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಆ ಕುಟುಂಬಕ್ಕೆ ಸೇರಿದ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. 22 ವರ್ಷದ ಯುವತಿಯನ್ನು ಅಪಹರಿಸಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಉದ್ರಿಕ್ತ  ಗುಂಪಿನ ಒತ್ತಾಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!