March 19, 2026

“ಮೆಕ್ಕಾ” ಮಹಾದೇವರ ದೇವಾಲಯ, ಈದ್ಗಾ ಶ್ರೀಕೃಷ್ಣ ಜನ್ಮಭೂಮಿ: ಹಿಂದೂ ಮಹಾಸಭಾದಿಂದ ವಿವಾದಾತ್ಮಕ ಕ್ಯಾಲೆಂಡರ್ ಬಿಡುಗಡೆ

0
image_editor_output_image-2065541534-1649232586475.jpg

ಅಲಿಗಢ್: ಆಲ್ ಇಂಡಿಯಾ ಹಿಂದೂ ಮಹಾಸಭಾ ಕಚೇರಿಯಲ್ಲಿ ಬಿಡುಗಡೆ ಮಾಡಿರುವ ಹಿಂದೂ ಹೊಸ ವರ್ಷದ ಕ್ಯಾಲೆಂಡರ್ ಮತ್ತೊಂದು ವಿವಾದಕ್ಕೆ ಎಡೆಮಾಡಿ ಮಾಡಿಕೊಟ್ಟಿದೆ.

ಹಿಂದೂ ಮಹಾಸಭಾ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ನಲ್ಲಿ ಮುಸ್ಲಿಮರ ಹಲವಾರು ಧಾರ್ಮಿಕ ಸ್ಥಳವನ್ನು ಹಿಂದೂ ದೇವಾಲಯ ಎಂದು ಉಲ್ಲೇಖಿಸಲಾಗಿದೆ ಎಂದು ವರದಿ ವಿವರಿಸಿದೆ.

ಮುಸ್ಲಿಮರ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೆಕ್ಕಾವನ್ನು ಮಕ್ಕೇಶ್ವರ್ ಮಹಾದೇವ್ ದೇವಾಲಯ ಎಂದು ಕ್ಯಾಲೆಂಡರ್ ನಲ್ಲಿ ಉಲ್ಲೇಖಿಸಲಾಗಿದೆ. ಮಥುರಾದ ದ ರಾಯಲ್ ಈದ್ಗಾವನ್ನು ಶ್ರೀಕೃಷ್ಣ ಜನ್ಮಭೂಮಿ ಎಂದು ಹೆಸರಿಸಲಾಗಿದೆ.

ತಾಜ್ ಮಹಲ್ ಅನ್ನು ತೇಜೊ ಮಹಾಲಯ ಶಿವ ದೇವಸ್ಥಾನ, ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿಯನ್ನು ಭೋಜ್ ಶಾಲಾ ಎಂದು ಕರೆಯಲಾಗಿದೆ. ಕಾಶಿಯ ಜ್ಞಾನವಾಪಿ ಮಸೀದಿಯನ್ನು ವಿಶ್ವನಾಥ ದೇವಾಲಯ ಎಂಬುದಾಗಿ, ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ, ಜೌನ್ ಪುರದ ಅಟ್ಲಾ ಮಸೀದಿಯನ್ನು ಅಟ್ಲಾ ದೇವಿ ದೇವಾಲಯ ಎಂದು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!