August 12, 2026

ಪ್ರಧಾನಿ ನರೇಂದ್ರ ಮೋದಿ ದೈವಿ ಪುರುಷರ, ಸ್ವಾಮಿ ವಿವೇಕಾನಂದರ ಪುನರ್ಜನ್ಮ: ಸಚಿವೆ ಶಶಿಕಲಾ ಜೊಲ್ಲೆ

0
Screenshot_2022-04-06-13-45-24-71_680d03679600f7af0b4c700c6b270fe7.jpg

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ದೈವಿ ಪುರುಷರಾಗಿದ್ದು, ಅವರು ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಏರ್ಪಡಿಸಿದ್ದ 42ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಹೆಸರು ನರೇಂದ್ರ ಎಂದಾಗಿತ್ತು. ಅವರನ್ನು ಚಿಕಾಗೋ ಸಮ್ಮೇಳನದಲ್ಲಿ ಕೊನೆಯಲ್ಲಿ ಕೂಡಿಸಿದ್ದರು. ಅವರ ಭಾಷಣದಿಂದ ಜಗತ್ತಿಗೆ ಭಾರತವನ್ನು ಪರಿಚಯಿಸಿದರು. ಅವರಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ಭಾರತ ಪರಿಚಯಿಸುವ ಮೂಲಕ ಗುರುವಾಗಿ ನಿಂತಿದ್ದಾರೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!