December 19, 2025

ಅಯೋಧ್ಯೆ: ಓವರ್‌ಟೇಕ್‌ ಮಾಡಲು ಯತ್ನಿಸುತ್ತಿದ್ದ ವೇಳೆ ಡಬಲ್‌ ಡೆಕ್ಕರ್ ಬಸ್ ಪಲ್ಟಿ: ಮೂವರು ಮೃತ್ಯು, 30 ಜನರು ಗಾಯ

0
image_editor_output_image-1901456829-1649148439533.jpg

ಅಯೋಧ್ಯೆ: ಓವರ್‌ಟೇಕ್‌ ಮಾಡಲು ಯತ್ನಿಸುತ್ತಿದ್ದ ವೇಳೆ ಡಬಲ್‌ ಡೆಕ್ಕರ್ ಬಸ್ ಪಲ್ಟಿಯಾಗಿ ಮೂವರು ಮೃತಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಲಖನೌ-ಗೋರಖ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಿಂದ ಬರುತ್ತಿದ್ದ ಖಾಸಗಿ ಬಸ್, ಮುಮ್ತಾಜ್ ನಗರ ಪ್ರದೇಶದ ಹೆದ್ದಾರಿಯಲ್ಲಿ ಮುಂಜಾನೆ 7 ಗಂಟೆ ಸುಮಾರಿಗೆ ಪಲ್ಟಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ಎಲ್ಲ ಗಾಯಾಳುಗಳನ್ನು ಫೈಜಾಬಾದ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 12 ಜನರನ್ನು ದಾಖಲಿಸಲಾಗಿದ್ದು, ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮರಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!