May 15, 2026

ಕೇರಳ: ಫೋಟೋಶೂಟ್ ವೇಳೆ ಕುಸಿದು ಬಿದ್ದು ವರ ಮೃತ್ಯು-ವಧು ಗಂಭೀರ: ಹಸೆಮನೆ ಏರಿದ ಕೆಲವೇ ದಿನದಲ್ಲಿ ದುರಂತ

0
image_editor_output_image746942077-1649135012436.jpg

ಕೇರಳ: ಹಸೆಮನೆ ಏರಿದ ಕೆಲವೇ ದಿನಕ್ಕೆ ನವದಂಪತಿಯ ಜೀವನ‌ ದಾರುಣವಾಗಿ ಅಂತ್ಯವಾಗಿದೆ.

ಫೋಟೋಶೂಟ್‌ ನಡೆಸುವ ವೇಳೆ ನವವಿವಾಹಿತರು ಬಂಡೆಯಿಂದ ಜಾರಿ ನೀರಿಗೆ ಬಿದ್ದು ವರ ಮೃತಪಟ್ಟು, ವಧುವಿನ ಸ್ಥಿತಿ ಗಂಭೀರವಾಗಿರುವ ಘಟನೆ
ಕೇರಳದ ಜಾನಕಿಕಾಡು ಬಳಿಯ ಕುಟ್ಟಿಯಾಡಿ ನದಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರೆಜಿಲ್ ಎಂದು ಗುರುತಿಸಲಾಗಿದ್ದು, ಪತ್ನಿ ಕಾರ್ತಿಕಾ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವ ದಂಪತಿಗಳು ಬಂಡೆಯ ಮೇಲೆ ನಿಂತು ಪೋಟೊ‌ಶೂಟ್ ಮಾಡುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ‌ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!