ಹಂಗಾಮಿ ಪ್ರಧಾನ ಮಂತ್ರಿ ನೇಮಕವಾಗುವವರೆಗೂ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಮಂತ್ರಿ: ಅಧ್ಯಕ್ಷ ಆರಿಫ್ ಅಲ್ವಿ ಪ್ರಕಟ
ಇಸ್ಲಾಮಾಬಾದ್: ಹಂಗಾಮಿ ಪ್ರಧಾನ ಮಂತ್ರಿ ನೇಮಕವಾಗುವವರೆಗೂ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ಸೋಮವಾರ ಪ್ರಕಟಿಸಿದ್ದಾರೆ.
ಹಂಗಾಮಿ ಪ್ರಧಾನ ಮಂತ್ರಿ ನೇಮಕವಾಗುವವರೆಗೂ ಹಾಲಿ ಪ್ರಧಾನ ಮಂತ್ರಿಯೇ ಕಚೇರಿ ಜವಾಬ್ದಾರಿಯನ್ನು ಮುಂದುವರೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ಕ್ಯಾಬಿನೇಟ್ ಸೆಕ್ರೆಟರಿಯೇಟ್ ಹೊರಡಿಸಲಾದ ಪ್ರಕಟಣೆಯಲ್ಲಿ ಕೂಡಲೇ ಜಾರಿಯಾಗುವಂತೆ ಪ್ರಧಾನಿ ಕಾರ್ಯಾಲಯದ ಜವಾಬ್ದಾರಿಯನ್ನು ಇಮ್ರಾನ್ ಖಾನ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು.





