March 19, 2026

ಚಿಕ್ಕಮಗಳೂರು: ಬಾರ್ ನಲ್ಲಿ ಚಿಲ್ಲರೆ ಹಣಕ್ಕಾಗಿ ನಡೆದ ಗಲಾಟೆಯಲ್ಲಿ ಕ್ಯಾಶಿಯರ್ ಹತ್ಯೆ

0
image_editor_output_image478407687-1649068669479.jpg

ಚಿಕ್ಕಮಗಳೂರು: ಚಿಲ್ಲರೆ ಹಣಕ್ಕಾಗಿ ನಡೆದ ಗಲಾಟೆ ಬಾರ್ ಕ್ಯಾಶಿಯರ್ ನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಬಾರ್ ಕ್ಯಾಶಿಯರ್ ಯಶ್‍ಪಾಲ್ (28 ವ) ಮೃತ ದುರ್ದೈವಿ. ಪ್ರವಾಸಕ್ಕೆಂದು ಬಂದಿದ್ದ ಯುವಕರ ಜೊತೆಗಿನ ಗಲಾಟೆಯಲ್ಲಿ ಎದೆಗೆ ಪೆಟ್ಟುಬಿದ್ದು ಯಶ್ ಪಾಲ್ ಸಾವನ್ನಪ್ಪಿದ್ದಾರೆ.

ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿ ಬಂದ ಆರು ಜನ ಯುವಕರ ತಂಡ ಬಿಯರ್ ಖರೀದಿಗೆ ಬಂದಿತ್ತು. ಈ ವೇಳೆ ಚಿಲ್ಲರೆ ಹಣಕ್ಕಾಗಿ ಯಶ್‍ಪಾಲ್ ಜೊತೆ ಯುವಕರ ತಂಡ ಕಿರಿಕ್ ಮಾಡಿಕೊಂಡಿದೆ. ವೈನ್ಸ್ ಮುಂದೆ ರಸ್ತೆಗೆ ಬೈಕ್ ಅಡ್ಡಲಾಗಿ ನಿಲ್ಲಿಸಿದ ಯುವಕರು ಗಲಾಟೆ ಮಾಡಿದ್ದಾರೆ.

ಇದನ್ನು ಪ್ರಶ್ನಿಸಿದ ಯಶ್‍ಪಾಲ್ ಎದೆಗೆ ಯುವಕರ ಗುಂಪಿನ ಓರ್ವ ಯುವಕ ಬಲವಾಗಿ ಹೊಡೆದಿದ್ದಾರೆ. ಚಿಕಿತ್ಸೆಗಾಗಿ ಯಶ್‍ಪಾಲ್ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ತೆರಳುವಾಗ ಮಾರ್ಗ ಮಧ್ಯೆ ಯಶ್ ಪಾಲ್ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!