March 19, 2026

ಸ್ಯಾನ್ ಫ್ರಾನ್ಸಿಸ್ಕೋ: ಗುಂಡಿನ ದಾಳಿಯಲ್ಲಿ ಆರು ಜನರು ಮೃತ್ಯು, 10 ಮಂದಿಗೆ ಗಾಯ 

0
image_editor_output_image726767142-1649026897486.jpg

ಸ್ಯಾನ್ ಫ್ರಾನ್ಸಿಸ್ಕೋ: ಕ್ಯಾಲಿಫೋರ್ನಿಯಾದ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇನ್ನು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ, ಪರಿಸ್ಥಿತಿಯನ್ನ ಅವಲೋಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಸಮುದಾಯದ ಕಾರ್ಯಕರ್ತ ಬ್ಯಾರಿ ಆಕ್ಸಿಯಸ್ ಘಟನೆಯ ಭಯಾನಕತೆಯನ್ನ ವಿವರಿಸಿದರು. ‘ನಾನು ಧಾವಿಸಿದ ತಕ್ಷಣ ಅಲ್ಲಿನ ದೃಶ್ಯವನ್ನ ನೋಡಿದೆ. ಪೊಲೀಸರು ಸುತ್ತಮುತ್ತ ಸೇರಿದ್ದರು.

ಗಾಯಗೊಂಡವರು ಸೇರಿದಂತೆ ಹಲವರ ದೇಹದಿಂದ ರಕ್ತ ಹರಿಯುತ್ತಿತ್ತು. ಜನರು ಕಿರುಚುತ್ತಿದ್ದರು, ಅಳುತ್ತಿದ್ದರು. ಹಲವರು ತಮ್ಮವರನ್ನ ಹುಡುಕಾಡುತ್ತಿದ್ದರು. ತಾಯಂದಿರು ತಮ್ಮ ಮಕ್ಕಳನ್ನ ಹುಡುಕುತ್ತಾ ಅಳುತ್ತಿದ್ದರು’ ಎಂದರು.

ಡೌನ್‌ಟೌನ್ ಪ್ರದೇಶದಲ್ಲಿ ಸುಮಾರು 2 ಗಂಟೆಯ ಸುಮಾರಿಗೆ ಶೂಟಿಂಗ್ ಸಂಭವಿಸಿದೆ. ತನಿಖೆ ನಡೆಯುತ್ತಿರುವುದರಿಂದ ಶೂಟೌಟ್ ನಡೆದ ಸ್ಥಳದಲ್ಲಿನ ಹಲವು ಬ್ಲಾಕ್ ಗಳನ್ನ ಮುಚ್ಚಲಾಗಿದೆ ಎಂದು ಸ್ಯಾಕ್ರಮೆಂಟೊ ಸಿಟಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!