March 19, 2026

ಐಷಾರಾಮಿ ಪಬ್ ಮೇಲೆ ಪೊಲೀಸರು ದಾಳಿ: ನಟಿ, ಗಾಯಕ, ರಾಜಕಾರಣಿ ಸೇರಿದಂತೆ ಹಲವರನ್ನು ವಶಕ್ಕೆ

0
image_editor_output_image1869842956-1649026514924.jpg

ಹೈದರಾಬಾದ್: ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ಐಷಾರಾಮಿ ಪಬ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ನಟಿ, ಗಾಯಕ, ರಾಜಕಾರಣಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ, ಗಾಯಕ ರಾಹುಲ್ ಸಿಪ್ಲಿಗಂಜ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಡರಾತ್ರಿ 3 ಗಂಟೆ ವೇಳೆಗೆ ಈ ದಾಳಿ ನಡೆದಿದ್ದು, ಹಲವು ಸೆಲೆಬ್ರಿಟಿಗಳ ಮಕ್ಕಳು ಮಾದಕ ವಸ್ತು ಸೇವನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ವೇಳೆ ಬೃಹತ್ ಪ್ರಮಾಣದ ಕೊಕೆನ್ ನ್ನೂ ವಶಪಡಿಸಿಕೊಳ್ಳಲಾಗಿದೆ.

ನಟಿ ನಿಹಾರಿಕಾ ಕೊನಿಡೆಲಾ ಅವರು ಟಾಲಿವುಡ್ ನಟ ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ. ಗಾಯಕ ರಾಹುಲ್ ಈ ಹಿಂದೆ ಬಿಗ್ ಬಾಸ್ ವಿನ್ನರ್‍ ಆಗಿದ್ದರು. ಬಂಧಿತರ ಪೈಕಿ ಓರ್ವ ರಾಜಕಾರಣಿಯೂ ಸೇರಿದ್ದಾರೆ. ಬಂಧಿತರನ್ನು ವಿಚಾರಣೆಗೊಳಿಸಿ ಬಳಿಕ ನಿಹಾರಿಕಾ ಹಾಗೂ ರಾಹುಲ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.

ನಿಹಾರಿಕಾ ತಂದೆ ನಾಗಬಾಬು ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಿಹಾರಿಕಾ ಪಬ್ ಗೆ ಹೋಗಿದ್ದಾರಾದರೂ ಪಾರ್ಟಿಯಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!