March 20, 2026

ಮದ್ಯಪಾನ ಮಾಡುವವರು ಭಾರತೀಯರಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

0
Screenshot_2022-03-31-15-59-14-66_680d03679600f7af0b4c700c6b270fe7.jpg

ಪಾಟ್ನಾ: ಮದ್ಯಪಾನ ಮಾಡುವವರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಮದ್ಯಪಾನ ನಿಷೇಧದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿಯವರು ಕೂಡ ಮದ್ಯಪಾನ ವಿರೋಧಿಗಳಾಗಿದ್ದರು. ಅವರ ಮಾತು ಪಾಲಿಸದವರು ಮತ್ತು ಮದ್ಯಪಾನ ಮಾಡುವವರನ್ನು ಭಾರತೀಯರು ಎಂದು ನಾನು ಪರಿಗಣಿಸುವುದಿಲ್ಲ’ ಎಂದು ಹೇಳಿದ್ದಾರೆ.

ಗಾಂಧೀಜಿಯವರು ಮದ್ಯಪಾನದಿಂದಾಗುವ ಹಾನಿಯ ಕುರಿತು ಭಾಷಣ ಮಾಡಿದ್ದರು. ಮದ್ಯಪಾನ ಮಾಡುವುದು ತಪ್ಪು ಎನ್ನುವುದು ಜನರಿಗೆ ತಿಳಿದಿದ್ದರೂ, ಮತ್ತೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂದು ನಿತೀಶ್ ತಿಳಿಸಿದ್ದಾರೆ.

ಮದ್ಯಪಾನಿಗಳ ಬಗ್ಗೆ ಯಾವುದೇ ರೀತಿಯ ಸಹಾನುಭೂತಿ ಹೊಂದುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!