March 19, 2026

ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಲೈಂಗಿಕತೆ ಅತ್ಯಾಚಾರಕ್ಕೆ ಸಮ: ಹೈಕೋರ್ಟ್‌

0
Screenshot_2022-03-24-11-22-28-04_680d03679600f7af0b4c700c6b270fe7.jpg

ಬೆಂಗಳೂರು: ‘ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ…’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ‘ಪತಿ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂಬ ಪ್ರಕರಣದಲ್ಲಿ ವಿಚಾರಣೆ ರದ್ದುಪಡಿಸಲು ಕೋರಿದ್ದ ಪತಿಯ ಮನವಿಯನ್ನು ತಳ್ಳಿ ಹಾಕಿದೆ.

‘ನನ್ನ ಹೆಂಡತಿ ನನ್ನ ಮೇಲೆ ಹೊರಿಸಿರುವ ಅತ್ಯಾಚಾರ ಪ್ರಕರಣ ರದ್ದುಗೊಳಿಸಬೇಕು ಹಾಗೂ ಪೋಕ್ಸೊ ಕಾಯ್ದೆಯ ಕಲಂ 29 ಮತ್ತು 30 ಸಂವಿಧಾನದ 14, 19 ಹಾಗೂ 21ಕ್ಕೆ ವಿರುದ್ಧವಾಗಿವೆ ಎಂದು ಘೋಷಿಸಬೇಕು’ ಎಂದು ಕೋರಿ ಹೃಷಿಕೇಶ (43) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಹೆಂಡತಿಯ ಜೊತೆ ನಡೆಸುವ ಲೈಂಗಿಕ ಕ್ರಿಯೆ ಸಮ್ಮತಿಯುಕ್ತವೇ ಹೊರತು ಅತ್ಯಾಚಾರವಲ್ಲ ಎಂದು ವಿವರಿಸುವ ಐಪಿಸಿ ಕಲಂ 375ರ ಕಾನೂನಾತ್ಮಕ ದೋಷವನ್ನು ಸರಿಪಡಿಸಬೇಕು. ಪತ್ನಿಯ ಶರೀರ, ಮನಸ್ಸು ಮತ್ತು ಆತ್ಮದ ಮೇಲೆ ಸವಾರಿ ನಡೆಸುವ ಪುರುಷನ ಪ್ರತಿಗಾಮಿ ಮನೋಧರ್ಮ ಕೊನೆಯಾಗಬೇಕು’ ಎಂದು ಹೇಳಿದೆ.

‘ಪತ್ನಿಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಹಬ್ಬುತ್ತಿವೆ. ಪತ್ನಿಯ ಸಮ್ಮತಿ ಇಲ್ಲದೆ ನಡೆಸುವ ಲೈಂಗಿಕತೆ ಅತ್ಯಾಚಾರಕ್ಕೆ ಸಮಾನ. ಇಂತಹ ನಡವಳಿಕೆ ಆಕೆಯ ಮನಸ್ಸು ಮತ್ತು ಶರೀರದ ಮೇಲೆ ಗಾಢ ಪರಿಣಾಮ ಬೀರಬಲ್ಲದು’ ಎಂದು ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!