ಉಳ್ಳಾಲ: ಎಸ್‍ಐಗೆ ಚೂರಿ ಇರಿದು ಪರಾರಿ, ಆರೋಪಿಯ ಸಹೋದರನ ವಶಕ್ಕೆ
ಉಳ್ಳಾಲ: ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ಬು ಬಂಧಿಸಲು ತೆರಳಿದ್ದ ವೇಳೆ ಎಸ್‍ಐಗೆ ಚೂರಿ ಇರಿದು ಪರಾರಿಯಾದ ಘಟನೆ ಉಳ್ಳಾಲದ ಕೋಣಾಜೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕೊಣಾಜೆ ಠಾಣಾ ಎಸ್.ಐ ಶರಣಪ್ಪ ಅವರಿಗೆ ಆರೋಪಿ ಚೂರಿ ಇರಿದು ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿಯ ಸಹೋದರನನ್ನು ವಶಕ್ಕೆ ಪಡೆದಿದ್ದು, ಆರೋಪಿ ಈ ಹಿಂದೆ ಬಂದರು ಠಾಣಾ ಪೊಲೀಸರಿಗೂ ಇದೇ ರೀತಿ ಚೂರಿಯಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.




