ಕಾಸರಗೋಡು: ಕಾರು ಚಾಲಕನಿಗೆ ಬೆದರಿಕೆಯೊಡ್ಡಿ ನಗದು ದರೋಡೆ ಪ್ರಕರಣ: ಆರೋಪಿ ಬಂಧನ
ಕಾಸರಗೋಡು: ಕಾರು ಚಾಲಕನಿಗೆ ಬೆದರಿಕೆಯೊಡ್ಡಿ ನಗದು ದರೋಡೆ ಮಾಡಿ ಕಾರು ಅಪಹರಿಸಿದ್ದ ಪ್ರಕರಣದ ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಬಂಧಿಸಿದೆ.
ಮೀಯಪದವು ಅಡ್ಕತ್ತಗುರಿಯ ರಹೀಮ್ ಬಂಧಿತ ಆರೋಪಿ. ಈತ ಮಾರ್ಚ್ 3ರಂದು ಪೈವಳಿಕೆ ನಿವಾಸಿಯನ್ನು ಬೆದರಿಸಿ ಕಾರು ಮತ್ತು 18 ಸಾವಿರ ರೂ. ನಗದನ್ನು ದರೋಡೆ ನಡೆಸಿದ್ದ. ಘಟನೆ ಸಂಬಂಧ ಸನಿಹದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಾಗಿ ಶೋಧ ನಡೆಸಿದ್ದ ಪೊಲೀಸರು ಇದೀಗ ಪೈವಳಿಕೆ ಬಾಯಿಕಟ್ಟೆ ಎಂಬಲ್ಲಿಂದ ಆತನನ್ನು ಬಂಧಿಸಿದ್ದಾರೆ. ಈತ ಪೋಲೀಸರ ಕೊಲೆಗೆ ಯತ್ನ, ಮಾದಕ ವಸ್ತು ಸಾಗಾಟ ಹಾಗೂ ಇನ್ನಿತರ ಪ್ರಕರಣಗಳ ಆರೋಪಿಯಾಗಿದ್ದಾನೆ.




