March 20, 2026

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ನಾಲ್ಕು ಮಂದಿಯ ಆರೋಪಿಗಳ ಬಂಧನ

0
n3706243741648043033435bbe72791932892246ce7e2b9c54e51d4e000180924c60c37e84ed2b9a0f7d894.jpg

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ನಾಲ್ಕು ಮಂದಿಯನ್ನು ಬಂಧಿಸಿದ ಮಂಜೇಶ್ವರ ಪೊಲೀಸರು ಇವರ ವಿರುದ್ಧ ಕಾಫಾ ಕಾಯ್ದೆ (ಗೂಂಡಾ ಕಾಯ್ದೆ) ಹೂಡಿದ್ದಾರೆ.

ಮಂಜೇಶ್ವರ ಠಾಣಾ ವ್ಯಾಪ್ತಿಯ ಕಡಂಬಾರ್ ಮೊರತ್ತಣೆಯ ಮುಹಮ್ಮದ್ ಅಸ್ಗರ್(24) ಮೀಯಪದವಿನ ಇಬ್ರಾಹಿಂ ಅರ್ಷಾದ್ ( 26) ಉಪ್ಪಳದ ರೌಫ್ (41) ಮತ್ತು ದೀಪಕ್ (36) ಎಂಬವರನ್ನು ಬಂಧಿಸಲಾಗಿದೆ.

ಅಸ್ಗರ್ ವಿರುದ್ಧ ದರೋಡೆ, ಕೊಲೆಯತ್ನ , ಮಾದಕವಸ್ತು ಸಾಗಾಟ, ಗುಂಡು ಹಾರಾಟ ನಡೆಸಿದ ಆರೋಪ, ಅರ್ಷಾದ್ ವಿರುದ್ಧ ಕೊಲೆ, ಗುಂಡು ಹಾರಾಟ ಸೇರಿದಂತೆ ಕುಂಬಳೆ, ಮಂಜೇಶ್ವರ ಠಾಣೆಯಲ್ಲಿ ಏಳಕ್ಕೂ ಅಧಿಕ ಪ್ರಕರಣಗಳಿವೆ. ರೌಫ್ ಹಲವು ಕಳವು ಪ್ರಕರಣಗಳ ಆರೋಪಿಯಾಗಿದ್ದು, ದೀಪಕ್ ವಿರುದ್ಧ ಕೊಲೆಯತ್ನ, ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!