March 20, 2026

ಬಂಟ್ವಾಳ: ಕಂದಕಕ್ಕೆ ಬಿದ್ದ ಕಾರು-5 ವರ್ಷದ ಬಾಲಕನಿಗೆ ಗಾಯ

0
image_editor_output_image-2114309994-1648035517227.png

ಬಂಟ್ವಾಳ: ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಮಾರುತಿ ಅಲ್ಟೋ ಕಾರು ಸುಮಾರು ಹತ್ತು ಅಡಿ ಆಳವಾದ ಕಂದಕಕ್ಕೆ ಬಿದ್ದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ. ಈ ಘಟನೆಯಲ್ಲಿ ಐದು ವರ್ಷದ ಬಾಲಕ ಗಾಯಗೊಂಡಿದ್ದಾನೆ.

ಇಂದು ಬೆಳಗ್ಗೆ ಅಲ್ಲಿಪಾದೆಯ ಗಿರೀಶ್ ಎಂಬವರಿಗೆ ಸೇರಿದ ಕಾರು, ಅಲ್ಲಿಪಾದೆಯಿಂದ ಬಿಸಿರೋಡ್‌ ಬರುತ್ತಿರುವ ವೇಳೆ ಬಂಟ್ವಾಳದ ಬೈಪಾಸ್ ಕೆಂಪುಗುಡ್ಡೆ ಕ್ರಾಸ್ ನ ಎದುರುಗಡೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ತಂತಿ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಬಳಿಕ ಆಳೆತ್ತರದ ಗುಂಡಿಗೆ ಪಲ್ಟಿಯಾಗಿ ಬಿದ್ದಿದೆ.

ಸುವಿದ್ ಎಂಬ ಬಾಲಕನಿಗೆ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!