August 13, 2026

ಪೆರ್ಲ: ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

0
image_editor_output_image915608261-1647925842921.jpg

ಕಾಸರಗೋಡು: ಸಹೋದರರೊಳಗಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸೋಮವಾರ ರಾತ್ರಿ ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ ನಡೆದಿದೆ.

ಉಪ್ಪಳಿಗೆಯ ಥೋಮಸ್ ಡಿಸೋಜ ( 45) ಕೊಲೆಗೀಡಾದವರು. ಈತನ ಸಹೋದರ ರಾಜೇಶ್ ( 37) ಕೃತ್ಯ ನಡೆಸಿದ್ದಾನೆ.

ರಾತ್ರಿ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರ ನಡುವಿನ ಜಗಳವನ್ನು ತಡೆಯಲು ಬಂದ ಥೋಮಸ್ ನ ಸಂಬಂಧಿಕ ವಿಲ್ಫ್ರೆಡ್ ಗೂ ಗಾಯಗಳಾಗಿವೆ. ಜಗಳ ವಿಕೋಪಕ್ಕೆ ತಿರುಗಿ ರಾಜೇಶ್ ನು ಥೋಮಸ್ ನನ್ನು ಇರಿದಿದ್ದು , ಬೊಬ್ಬೆ ಕೇಳಿ ಸ್ಥಳೀಯರು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಥೋಮಸ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

ರಾಜೇಶ್ ಬದಿಯಡ್ಕ ಪೊಲೀಸ್ ಠಾಣೆ ಗೆ ಶರಣಾಗಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡ ವಿಲ್ಫ್ರೆಡ್’ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!