August 13, 2026

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದಿನಿಂದ ಮತ್ತೆ ಏರಿಕೆ

0
Screenshot_2022-03-22-10-34-58-18_680d03679600f7af0b4c700c6b270fe7.jpg

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಂದಿನಿಂದ ಏರಿಕೆಯಾಗಿದ್ದು, 137 ದಿನಗಳ ಇಂಧನ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಈ ಕುರಿತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 80 ಪೈಸೆಗಳಷ್ಟು ಹೆಚ್ಚಾಗಲಿದ್ದು, ನಾಲ್ಕು ತಿಂಗಳ ಅಂತರದ ನಂತರ ಮಂಗಳವಾರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಲಾಗಿದೆ.

ಇನ್ನು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ 96.21, ಪ್ರತಿ ಲೀಟರ್‌ ಡೀಸೆಲ್‌ಗೆ 87.47, ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ 110.78, ಡೀಸೆಲ್‌ 94.94, ಕೋಲ್ಕತ್ತದಲ್ಲಿ ಪೆಟ್ರೋಲ್‌ 102.16 ಮತ್ತು ಡೀಸೆಲ್‌ 90.62, ಚೆನ್ನೈನಲ್ಲಿ ಪೆಟ್ರೋಲ್‌ ದರ102.16, ಡೀಸೆಲ್‌ ದರ 92.19 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 101.42 ಮತ್ತು ಡೀಸೆಲ್‌ಗೆ 85.80 ತಲುಪಿದೆ.

Leave a Reply

Your email address will not be published. Required fields are marked *

You may have missed

error: Content is protected !!