ಯುಎಇ: ಅಜ್ಮಾನ್ ತುಂಬೆ ಯನಿವರ್ಸಿಟಿಗೆ ಗಣ್ಯರ ಭೇಟಿ
ದುಬೈ: ಯುಎಇ ಯ ಅಜ್ಮಾನ್ ಅಲ್ ಜರ್ಫ್ ನಲ್ಲಿರುವ ತುಂಬೆ ಯುನಿವರ್ಸಿಟಿ ಆಸ್ಪತ್ರೆಗೆ ಸೋಮವಾರ (21/03) ತುಳು ಚಿತ್ರರಂಗದ ದಿಗ್ಗಜ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮತ್ತವರ ತಂಡ ಭೇಟಿ ನೀಡಿದರು. ತುಂಬೆ ಯುನಿವರ್ಸಿಟಿ ಸ್ಥಾಪಕಾಧ್ಯಕ್ಷರಾದ ತುಂಬೆ ಮೊಯ್ದಿನ್ ಆತ್ಮೀಯವಾಗಿ ಸ್ವಾಗತಿಸಿದರು.
ತುಳು ಚಿತ್ರರಂಗದ ಕುರಿತು ಸುದೀರ್ಘವಾದ ಚರ್ಚೆ ನಡೆಸಿದ ತುಂಬೆ ಮೊಯ್ದಿನ್ ಶುಭ ಹಾರೈಸಿದರು. ತಾಯ್ನಾಡಿನ ಅಶಕ್ತ ಜನರಿಗೆ ಸ್ಪಂದಿಸುವ, ತುಂಬೆ ನಾಡನ್ನು ಇನ್ನಷ್ಟು ಜನಮಾನಸಗೊಳಿಸುವ ಯೋಜನೆಯ ಬಗ್ಗೆ ಚರ್ಚಿಸಿದರು. ತುಳು ಚಿತ್ರನಟರಾದ ದೇವದಾಸ್ ಕಾಪಿಕಾಡ್, ಸಾಯಿಕೃಷ್ಣ ಕುಡ್ಲ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ, ಉದ್ಯಮಿ ಅಬೂಬಕರ್ ಪುತ್ತು ಉಪ್ಪಿನಂಗಡಿ, ತುಂಬೆ ಯುನಿವರ್ಸಿಟಿ ಮೀಡಿಯಾ ಸಿಓಓ ವಿಘ್ನೇಶ್ ಎಸ್. ಉನದ್ಕಟ್ ಉಪಸ್ಥಿತರಿದ್ದರು.