ಉಪ್ಪಳ: ಬಾವಿಗೆ ಬಿದ್ದು ನಾಲ್ಕು ವರ್ಷದ ಬಾಲಕ ಮೃತ್ಯು

ಕಾಸರಗೋಡು: ಬಾವಿಗೆ ಬಿದ್ದು ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಗುರುವಾರ ಸಂಜೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ಐಲ ಮೈದಾನ ಸಮೀಪದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಜಾರ್ಖಂಡ್ ಮೂಲದ ಶೌಕತ್ ಅಲಿ ರವರ ಪುತ್ರ ಮುಬಾಶಿರ್ ನೂರಿ ಮೃತ ಪಟ್ಟ ಬಾಲಕ.
ಫ್ಲಾಟ್ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ಬಾವಿ ಹತ್ತಿರ ತೆರಳಿ ಬಾವಿಗೆ ಇಣುಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಪರಿಸರ ವಾಸಿಗಳು ಮೇಲಕ್ಕೆತ್ತಿದರೂ ಬಾಲಕ ಮೃತಪಟ್ಟಿದ್ದನು. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.