May 10, 2026

ಸರಳಿಕಟ್ಟೆ: ತೋಟದಿಂದ ಅಡಿಕೆ ಕಳ್ಳತನ:
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳ

0
image_editor_output_image-1922216649-1635489464123

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆಯ ತೋಟವೊಂದರಲ್ಲಿ ಅಡಿಕೆಗಳನ್ನು ಕದಿಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿದ ಕಳ್ಳನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಸಂಭವಿಸಿದೆ.

ಸರಳಿಕಟ್ಟೆಯ ಉಸ್ಮಾನ್ ಎಂಬವರ ತೋಟದಿಂದ ಅಡಿಕೆಗಳನ್ನು ಕದಿಯುತ್ತಿದ್ದ ಪುತ್ತೂರು ಮೂಲದ ಪ್ರಕಾಶ್ ಎಂದು ಗುರುತಿಸಲಾಗಿದೆ. ಇಂದು ಅಡಿಕೆ ಸಹಿತ ಸಾರ್ವಜನಿಕರ ಕೈ ಗೆ ಸಿಕ್ಕಿ ಬಿದ್ದಿದ್ದಾನೆ.

ತಿಂಗಳ ಹಿಂದೆ ಇದೇ ಪರಿಸರದಲ್ಲಿ ಮನೆಯೊಂದನ್ನು ದರೋಡೆ ಮಾಡಿ ಲಕ್ಷಾಂತರ ಬೆಳೆ ಬಾಳುವ ಚಿನ್ನ ಮತ್ತು ಹಣವನ್ನು ದೋಚಿದ ಕಳ್ಳರ ಕೃತ್ಯದಿಂದ ಭಯಭೀತರಾಗಿದ್ದಂತಹ ಸಂದರ್ಭದಲ್ಲಿಯೇ ಅಡಿಕೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸೆರೆಹಿಡಿಯುವ ಮೂಲಕ ಸಾರ್ವಜನಿಕರು ನಿಟ್ಟುಸಿರುಬಿಟ್ಟಂತಾಗಿದೆ.

ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!