ಬೆಳ್ತಂಗಡಿ: ಮೊದಲ ಪತ್ನಿಗೆ ವಂಚಿಸಿ ದೇವಸ್ಥಾನದಲ್ಲಿ ಎರಡನೇ ಮದುವೆ:
ಗಂಡನ ವಿರುದ್ದ ದೂರು ನೀಡಿದ ಪತ್ನಿ
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಗ್ರಾಮದ ಪತಿ ಮತ್ತು ಆತನ ತಾಯಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದುದಲ್ಲದೆ ಇದೀಗ ನನ್ನನ್ನು ವಂಚಿಸಿ ಎರಡನೇ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕರೀಮಣೆಲು ಗ್ರಾಮದ ಗಾಂಧಿನಗರದ
ದೀಕ್ಷಾ(24) ಎಂಬವರು ಮೇಲಂತಬೆಟ್ಟು ಗ್ರಾಮದ ಮಾತೃಶ್ರೀ ನಿವಾಸಿ ಬೆಳ್ತಂಗಡಿ ಸರ್ವೆ ಇಲಾಖೆಯ ದಿನಕೂಲಿ ನೌಕರ ಚೇತನ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಪತಿ ಚೇತನ್ ಮತ್ತು ಆತನ ತಾಯಿ ನಳಿನಿ ಅವರು ವಿರುದ್ಧ ಪ್ರಕರಣ ದಾಖಲಾಗಿದೆ.
ಚೇತನ್ ಎಂಬುವರನ್ನು ಹಿಂದೂ ಧರ್ಮದ ಸಂಪ್ರಾದಾಯದಂತೆ ಮದುವೆಯಾಗಿ ಸುಮಾರು 4 ವರ್ಷದ ದೃತಿ ಎಂಬ ಮಗಳು ಇದ್ದು, ಗಂಡನ ಮನೆಯಾದ ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಮಾತೃಶ್ರೀ ನಿಲಯ ಎಂಬಲ್ಲಿ ವಾಸ್ತವ್ಯವಿದ್ದಾಗ ಆರೋಪಿಗಳು ಕ್ಷುಲಕ ವಿಚಾರಗಳನ್ನು ಮುಂದಿಟ್ಟುಗೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಆದರೂ ಸಹಿಸಿಕೊಂಡಿದ್ದು ಬಂದಿದ್ದು ನಂತರ ಹಿಂಸೆ ತಾಳಲಾಗದೆ 7 ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದಾರೆ. ಆ ಸಮಯ ಆರೋಪಿತನು ಲಾಯಿಲ ಗ್ರಾಮದ ಸುರಕ್ಷಾ ಎಂಬ ಹುಡುಗಿಯನ್ನು ಕುತ್ರೋಟ್ಟು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ, ಈ ಬಗ್ಗೆ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಚೇತನ್ ಬೆಳ್ತಂಗಡಿ ತಾಲೂಕು ಕಛೇರಿಯ ಸರ್ವೆ ಇಲಾಖೆಯ ಬಾಂದ್ ಜವಾನನಾಗಿ ದುಡಿಯುತ್ತಿದ್ದು, ಜೆರಾಕ್ಸ್ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದಾಕೆಯನ್ನು ಎರಡನೇ ಮದುವೆಯಾಗಿದ್ದಾನೆ.