ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಅಪಘಾತ: ಇಬ್ಬರು ಯುವಕರು ಮೃತ್ಯು
ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಉದುಮದಲ್ಲಿ ನಡೆದಿದೆ.
ಮೃತರನ್ನು ಮಲಪ್ಪುರಂನ ಜಂಶೀರ್ (22)ಮತ್ತು ಮುಹಮ್ಮದ್ ಶಿಬಿಲ್ ( 20) ಎಂದು ಗುರುತಿಸಲಾಗಿದೆ.
ಇಬ್ಬರು ಗೋವಾದಲ್ಲಿ ನಡೆಯಲಿರುವ ಐಎಸ್‌ಎಲ್ ಫುಟ್ಬಾಲ್ ಪೈನಲ್ ಪಂದ್ಯ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಉದುಮ ಪಳ್ಳ ಎಂಬಲ್ಲಿ ಮುಂಜಾನೆ ಐದು ಗಂಟೆ ಸುಮಾರಿಗೆ ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.




