March 23, 2026

ಮಹಿಳೆಗೆ ಕಿರುಕುಳ ಪ್ರಕರಣ: ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಮಾಜಿ‌ ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್

0
IMG-20220320-WA0002.jpg

ಚೆನ್ನೈ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಮಾಜಿ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ಅವರನ್ನು ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಂಬಕ್ಕಂ ಪೊಲೀಸರು ಬಂಧಿಸಿದ್ದಾರೆ.
2020ರ ಜುಲೈನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಡಾ.ಸುಬ್ಬಯ್ಯ ಷಣ್ಮುಗಂ ವಿರುದ್ಧ ದೂರು ದಾಖಲಿಸಲಾಗಿತ್ತು.

ಷಣ್ಮುಗಂ ಕಿರುಕುಳದ ಜೊತೆಗೆ ದೂರು ದಾರ ಮಹಿಳೆಯ‌ ಮನೆಯ ಮುಂದೆಯೇ ಮೂತ್ರ ಮಾಡುತ್ತಿದ್ದ. ಆಕೆ ಸಸ್ಯಹಾರಿ ಎಂದು ತಿಳಿದಿದ್ದರೂ ಆಕೆಯ ಮನೆಯ ಮುಂದೆ ಮಾಂಸವನ್ನು ಎಸೆಯುತ್ತಿದ್ದ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ ಮತ್ತು ಷಣ್ಮುಗಂ ಅವರು ನಂಗಾನಲ್ಲೂರಿನಲ್ಲಿ ಒಂದೇ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ಪಾರ್ಕಿಂಗ್‌ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಬಳಿಕ ಮಹಿಳೆಗೆ ಆರೋಪಿ‌ ಕಿರುಕುಳ ನೀಡುವುದನ್ನು ಆರಂಭಿಸಿದ್ದ.

Leave a Reply

Your email address will not be published. Required fields are marked *

error: Content is protected !!