ಮಂಗಳೂರು: ಜನಪ್ರಿಯ ಆಸ್ಪತ್ರೆಯಲ್ಲಿ ಯು.ಟಿ. ಖಾದರ್ ಅವರ 57ನೇ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು: ಆರೋಗ್ಯ ಸಚಿವ ಶ್ರೀ ಯು.ಟಿ. ಖಾದರ್ ಅವರ 57ನೇ ಜನ್ಮದಿನದ ಅಂಗವಾಗಿ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

“ಜೀವನದಲ್ಲಿ ಇನ್ನೊಬ್ಬರಿಗೆ ನೀಡಬಹುದಾದ ಅಮೂಲ್ಯ ಕೊಡುಗೆಯೆಂದರೆ ಆರೋಗ್ಯ ಸಹಾಯ. ಇದು ಬೆಲೆ ಕಟ್ಟಲಾಗದ ಕೊಡುಗೆ” ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಶಿಬಿರವು ಆರೋಗ್ಯ ಸೇವೆಯ ಮಹತ್ವವನ್ನು ಸಾರಿತು.

ಜನ್ಮದಿನದ ನೆನಪಿಗಾಗಿ ಇಂತಹ ಜನಪರ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಉಪಸ್ಥಿತರಿದ್ದ ಗಣ್ಯರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಬಶೀರ್ ವಿ.ಕೆ. ಅವರ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಗಣ್ಯರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರುಖ್ ಅಬ್ದುಲ್ಲ, ವಿದ್ಯಾರ್ಥಿ ನಾಯಕ ಶ್ರೀ ಯು.ಟಿ. ಫರೀದ್, ಆಸ್ಪತ್ರೆಯ ಸಿಇಒ ಡಾ. ಕಿರಾಶ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಹಾಗೂ ವಕ್ತಾರ ಶ್ರೀ ನಾಸಿರ್ ಸಾಮಣಿಗೆ, ಹಿರಿಯ ಪತ್ರಕರ್ತ ಶ್ರೀ ಬಶೀರ್ ಕಲ್ಕಟ್ಟ, ಹ್ಯೂಮಾನಿಟಿ ಫೌಂಡೇಷನ್ ಕೋಶಾಧಿಕಾರಿ ಶ್ರೀ ಇಲ್ಯಾಸ್ ಚಾರ್ಮಾಡಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಶ್ರೀ ಮಹಮ್ಮದ್ ಮೋನು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ಬಶೀರ್, ಡಾ. ಮೇಘಶ್ಯಾಮ್, ಡಾ. ತ್ರಿವಿಕ್ರಮ್, ಡಾ. ನಿಧಾಲ್ ಹಾಗೂ ವೈದ್ಯರಾದ ಡಾ. ಹಸ್ಸನ್ ಮುಬಾರಕ್ ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ಮಹಮ್ಮದ್ ಇಕ್ಬಾಲ್ ವಿಟ್ಲ, ಜನಪ್ರಿಯ ಆಸ್ಪತ್ರೆಯ ಆದೀಲ್ , ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಭಾತೀಷ್ ಅಳಕೆಮಜಲು, ಶ್ರೀ ನವಾಜ್, ಹಿರಿಯ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನಪ್ರಿಯ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಅಧಿಕಾರಿ ರಾಧಾಕೃಷ್ಣ ಎರುಂಬು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.






