December 15, 2025

ಕತಾರ್ ಇಂಡಿಯನ್‌ ಸೋಷಿಯಲ್‌ ಫೋರಂ QISF ವತಿಯಿಂದ: ಎಂ. ಎಸ್. ಬುಖಾರಿ ಮೆಮೋರಿಯಲ್ ಕಪ್ ಕ್ರೀಡಾ ಕೂಟ

0
IMG-20220316-WA0044.jpg

ದೋಹಾ: ಕತಾರ್ ರಾಷ್ಟ್ರೀಯ ಕ್ರೀಡಾ ದಿನ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಉಪಕ್ರಮಗಳ ಜೊತೆಯಲ್ಲಿ ಆಯೋಜಿಸಲಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್‌ನ ಎಂ. ಸಬೀಹ್ ಬುಖಾರಿ ಸ್ಮಾರಕ ಕಪ್, ಮೊದಲ ಆವೃತ್ತಿಯ ಕ್ರೀಡಾ ಪಂದ್ಯಾವಳಿಯು, ಎರಡು ವಾರಗಳ ಕಾಲ ನಡೆದು, ಶುಕ್ರವಾರ ಮಾರ್ಚ್ 11 ರಂದು ಅಬು ಹಮೂರ್‌ನಲ್ಲಿರುವ ಅಲ್ ಜಜೀ಼ರಾ ಅಕಾಡೆಮಿ ಮೈದಾನದಲ್ಲಿ ಮುಕ್ತಾಯಗೊಂಡಿತು.

ಫುಟ್ಬಾಲ್, ವಾಲಿಬಾಲ್, ಕಬಡ್ಡಿ ಮತ್ತು ಹಗ್ಗಜಗ್ಗಾಟದಲ್ಲಿ ಕತಾರ್ ನ ವಿವಿಧ ಕ್ರೀಡಾ ಕ್ಲಬ್ ಗಳ ಐವತ್ತು ತಂಡಗಳು ಸ್ಪರ್ಧಿಸಿದ್ದವು. ಫುಟ್ ಬಾಲ್ ನಲ್ಲಿ ಸೋಶಿಯಲ್ ಫೋರಂ ಕೇರಳ ತಂಡವನ್ನು ಸೋಲಿಸಿ, ಸೋಶಿಯಲ್ ಫೋರಂ, ಕರ್ನಾಟಕ ತಂಡವು ಪ್ರಶಸ್ತಿ ಗೆದ್ದುಕೊಂಡಿತು. ದೋಹಾ ತಂಡವು ವಾಲಿಬಾಲ್ ಪಂದ್ಯಾವಳಿಯಲ್ಲಿ ಇವಾಕ್ ಅನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದೆ. ಕಬಡ್ಡಿಯಲ್ಲಿ ಹಸನಾಸ್ಕೋ-ಎ ಬ್ಲಾಕ್ ತಂಡವು ಮರ್ಕಿಯ ಕ್ಯಾಟ್ಸ್ – ಎ ತಂಡವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡರೆ, 16 ತಂಡಗಳ ನಡುವೆ ನಡೆದ ಹಗ್ಗಜಗ್ಗಾಟದಲ್ಲಿ, ಫೈನಲ್ ತಲುಪಿದ ಝಾಕ್ ಕತಾರ್ ತಂಡ, ತಿರೂರ್ ತಂಡವನ್ನು ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಡೆದ ಸೋಶಿಯಲ್ ಫೋರಂನ 10 ತಂಡಗಳ ವರ್ಣರಂಜಿತ ಪಥ ಸಂಚಲನದಲ್ಲಿ ವಕ್ರಾ ರೆಬೆಲ್ಸ್ ತಂಡ ಪ್ರಥಮ ಸ್ಥಾನ, ರುಮೈಲಾ ತಂಡ ದ್ವಿತೀಯ ಸ್ಥಾನ ಮತ್ತು ಕರ್ನಾಟಕ ತಂಡ ಮೂರನೇ ಸ್ಥಾನ ಪಡೆಯಿತು. ಪೆನಾಲ್ಟಿ ಶೂಟೌಟ್ ಮತ್ತು ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ವಿಜೇತರಿಗೆ ಟ್ರೋಫಿಗಳನ್ನು ವಿತರಿಸಿದರು.
ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ (ಚಾನ್ಸೆರಿ ಮುಖ್ಯಸ್ಥರು) ಸುಮನ್ ಸೊಂಗರ್ ಮುಖ್ಯ ಅತಿಥಿಯಾಗಿದ್ದರು. ಸೋಫಿಯಾ ಬುಖಾರಿ, ಸೈಮಾ ಸಬೀಹ್ ಬುಖಾರಿ, ಡಾ. ಸೈಯದ್ ಜಾಫ್ರಿ (ಅಧ್ಯಕ್ಷ AMU ಅಲುಮ್ನಿ ಕತಾರ್), ಅಫ್ರೋಜ್ ಅಹ್ಮದ್ ದಾವರ್ (ಅಧ್ಯಕ್ಷ IABJ), ಸಜ್ಜಾದ್ ಆಲಂ (ಉಪಾಧ್ಯಕ್ಷರು IABJ), ಫಯಾಜ್ ಅಹ್ಮದ್ (ಅಧ್ಯಕ್ಷರು KMCA), ಡಾ. ಸಿ.ಕೆ. ಅಬ್ದುಲ್ಲಾ (ಅಧ್ಯಕ್ಷರು, ಕತಾರ್ ಇಂಡಿಯಾ ಫ್ರೆಟರ್ನಿಟಿ ಫೋರಂ), ಮಶ್ಹೂದ್ ತಿರುತಿಯಾಡ್ (ಜನರಲ್ ಕನ್ವೀನರ್, ಪಿಸಿಸಿ ಕತಾರ್), ಅಬ್ದುಲ್ಲಾ ಮೋನು (ಹಿದಾಯ ಫೌಂಡೇಶನ್), ಅಯೂಬ್ ಉಳ್ಳಾಲ್ (ಅಧ್ಯಕ್ಷರು, ಕತಾರ್ ಇಂಡಿಯನ್ ಸೋಷಿಯಲ್ ಫೋರಂ), ಸಕೀನಾ ರಜಾಕ್ (ಉಪಾಧ್ಯಕ್ಷರು, ಮಹಿಳಾ ಬಂಧುತ್ವ), ಮುಮ್ತಾಜ್ ಹುಸೇನ್ (ಖ್ಯಾತ ಉದ್ಯಮಿಗಳು), ಶಾನಿಬ್ (ಆಪರೇಷನ್ಸ್ ಮ್ಯಾನೇಜರ್, ಸಿಟಿ ಎಕ್ಸ್ಚೇಂಜ್), ಶಮೀರ್ (ಜನರಲ್ ಮ್ಯಾನೇಜರ್, ಆಗ್ಬಿಸ್), ನಿಶಾಸ್ (ಬೀಕನ್) ಮತ್ತಿತರರು ಉಪಸ್ಥಿತರಿದ್ದರು. ಕತಾರ್ ಇಂಡಿಯನ್ ಸೋಶಿಯಲ್ ಫೋರಂನ ಪ್ರಧಾನ ಕಾರ್ಯದರ್ಶಿ ಸಯೀದ್ ಕೊಮಾಚಿ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!