February 3, 2026

ಬಸ್’ಗಳಲ್ಲಿ ಅಳವಡಿಸಿದ್ದ ಕರ್ಕಶ ಹಾರ್ನ್: ಪೋಲಿಸರಿಂದ ಕಾರ್ಯಾಚರಣೆ

0
image_editor_output_image1119272915-1647331939029.jpg

ಉಡುಪಿ: ಬಸ್’ಗಳಲ್ಲಿ ಅಳವಡಿಸಿದ್ದ ಕರ್ಕಶ ಹಾರ್ನ್ ವಿರುದ್ದ ಮಾ.೧೫ರ ಮಂಗಳವಾರ ಉಡುಪಿ ಸಂಚಾರಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ.

ಉಡುಪಿ ಟ್ರಾಪಿಕ್ ಎಸ್ ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಉಡುಪಿ ನಗರ ಭಾಗದಲ್ಲಿ ಕರ್ಕಶ ಹಾರ್ನ್ ಬಳಸಿ ಶಬ್ದಮಾಲಿನ್ಯ ಉಂಟು ಮಾಡುತ್ತಿದ್ದ ಬಸ್ ಗಳ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ತಾಲ್ಲೂಕು ಕಚೇರಿ ಬಳಿ ಮಂಗಳೂರು ಉಡುಪಿ ನಡುವೆ ಸಂಚರಿಸುವ ಎಕ್ಸ್ ಪ್ರೆಸ್, ಸರ್ವಿಸ್ ಬಸ್ ಗಳನ್ನು ತಪಾಸಣೆ ನಡೆಸಿದ ಪೋಲಿಸರು, ಚಾಲಕ, ನಿರ್ವಾಹಕರ ಕೈಯಿಂದಲೇ ಹಾರ್ನ್ ಗಳನ್ನು ತೆರವುಗೊಳಿಸಿದ್ದಾರೆ. ಏರ್ ಹಾರ್ನ್ ಅಳವಡಿಸಿಕೊಂಡಿದ್ದ ಬಸ್ ಗಳ ವಿರುದ್ದ ದಂಡ ಪ್ರಯೋಗ ಮಾಡಿ ಹಾರ್ನ್ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!