August 21, 2026

ಕರ್ನಾಟಕ ಎಜುಕೇಶನ್ ಆಕ್ಟ್’ನಲ್ಲಿ ಬದಲಾವಣೆ ಮಾಡುತ್ತೇವೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

0
Screenshot_2022-03-15-12-09-51-41_680d03679600f7af0b4c700c6b270fe7.jpg

ಬೆಂಗಳೂರು: ಮುಂದಿನ ದಿನಗಳಲ್ಲಿ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ‘ಕರ್ನಾಟಕ ಎಜುಕೇಶನ್ ಆಕ್ಟ್’ನಲ್ಲಿ ಬದಲಾವಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕರ್ನಾಟಕ ಎಜುಕೇಶನ್ ಆಕ್ಟ್ ನಲ್ಲಿ ಇರುವ ಗೊಂದಲವನ್ನು ಈ ತೀರ್ಪಿನ ಆಧಾರದ ಮೇಲೆ ಬದಲಾವಣೆ ಮಾಡಲಾಗುತ್ತದೆ. ರಾಷ್ಟ್ರೀಯ ಏಕತೆಯನ್ನು ಬಿಂಬಿಸುವಲ್ಲಿ ಸಮವಸ್ತ್ರ ಸಹಕಾರಿ. ಅದಕ್ಕಾಗಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲಾಗಿತ್ತು ಎಂದರು.

ಹಿಜಾಬ್ ಅನುಮತಿ ವಿವಾದದ ಬಗ್ಗೆ ಹೆಣ್ಣುಮಕ್ಕಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಆದರೆ ನಾವು ಅವರಿಗೆ ಸಮವಸ್ತ್ರ ಮತ್ತು ಶಿಕ್ಷಣದ ಪ್ರಾಮುಖ್ಯತೆ ತಿಳಿಸಿ ಅವರು ಶಾಲೆಗೆ ಬಂದು ತರಗತಿಗೆ ಹಾಜರಾಗಿ, ವಿದ್ಯಾಭ್ಯಾಸ ಮುಂದುವರೆಸುವಲ್ಲಿ ಮಾತನಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರು ಇದನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!