September 20, 2024

ಶಾಂತಿ ಕಾಪಾಡಲು ನಿಮ್ಮ ಪುಕ್ಕಟೆ ಸಲಹೆ ಬೇಕಾಗಿಲ್ಲ: ಅನೀಸ್ ಕೌಸರಿ

0

ಮಂಗಳೂರು: ಹಿಜಾಬ್ ಕುರಿತ ತೀರ್ಪು ಬಂದಿದೆ. ತೀರ್ಪಿನಲ್ಲಿ ನಿರಾಶೆ ಇದೆ. ಆದರೂ ನ್ಯಾಯಾಲಯವನ್ನು ಗೌರವಿಸುತ್ತೇವೆ. ಮೇಲ್ಮನವಿಗೆ ಅವಕಾಶವಿದೆ. ಖಂಡಿತವಾಗಿಯೂ ಸಮುದಾಯ ನಾಯತಕತ್ವ ಚಿಂತಿಸಿ ಮುಂದಿನ ಹೆಜ್ಜೆ ಇರಿಸಲಿದೆ ಎಂದು ಎಸ್ ಕೆಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರತಿಕ್ರಿಯಿಸಿದ್ದಾರೆ.

ಶಾಂತಿ ಕಾಪಾಡಲು ನೀವೇನು ಪುಕ್ಕಟೆ ಸಲಹೆ ಕೊಡಬೇಕಾಗಿಲ್ಲ. ಮುಸ್ಲಿಮ್ ಸಮುದಾಯ ಯಾವತ್ತೂ ಇಲ್ಲಿ ಅರಾಜಕತೆ, ಅಶಾಂತಿ ಮಾಡಿಲ್ಲ. ಇಂದೂ, ಇನ್ನೆಂದೂ ಮಾಡುವುದಿಲ್ಲ ಎಂದರು.

ಸಹನೆ ನಮ್ಮ ಈಮಾನಿನ ಅಂಶವಾಗಿದೆ. ಈ ನೋವು ಕೊಡುವುದರೆಡೆಯಲ್ಲೂ ಮುಸ್ಲಿಂ ಸಮುದಾಯವನ್ನು ಭೀಕರ ಜೀವಿಗಳಾಗಿ ಚಿತ್ರೀಕರಿಸಲು ತುಕಡಿ, ಸೆಕ್ಷನ್ ಹೀಗೆ ಏನೇನೋ ಮಾತಿನಲ್ಲಿ ಮಾಧ್ಯಮಗಳು ಜೋತು ಬಿದ್ದಿದೆ. ಕೂಲಿಯಾಳು ಮಾಧ್ಯಮಗಳು ಕೂಲಿ ಕೆಲಸ ಮುಂದುವರಿಸುತ್ತಿದೆ. ಹಿಜಾಬಿಗಾಗಿ ಬೋನಸ್ ಸಿಕ್ಕಿರಬಹುದು. ಮಾಡಲಿ, ಆಲ್ ರೈಟ್ ನಾವು ಮುಂದಕ್ಕೋಗೋನ…ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!