August 21, 2026

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಕೌನ್ಸಿಲರ್‌ಗಳ ಗುಂಡಿಕ್ಕಿ ಹತ್ಯೆ

0
image_editor_output_image-367413278-1647249002659.jpg

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಎರಡು ಪ್ರತ್ಯೆಕ ಘಟನೆಯಲ್ಲಿ ಹೊಸದಾಗಿ ಆಯ್ಕೆಯಾದ ಇಬ್ಬರು ಚುನಾಯಿತ ಕೌನ್ಸಿಲರ್‌ಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪಾನಿಹಟಿ ಮತ್ತು ಝಲ್ಡಾ ಪ್ರದೇಶಗಳಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಹತ್ಯೆಯಾದ ಇಬ್ಬರು ಕೌನ್ಸಿಲರ್‌ ಗಳ ಪೈಕಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇನ್ನೊಬ್ಬರು ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಪಾನಿಹಟಿ ಪುರಸಭೆಯ ಟಿಎಂಸಿ ಕೌನ್ಸಿಲರ್ ಅನುಪಮ್ ದತ್ತಾ ಅವರು ಅಗರ್‌ಪಾರಾದ ಉತ್ತರ ಸ್ಟೇಷನ್ ರಸ್ತೆಯಲ್ಲಿರುವ ಉದ್ಯಾನವನಕ್ಕೆ ತೆರಳುತ್ತಿದ್ದಾಗ ಭಾನುವಾರ ಸಂಜೆ ಪಾನಿಹಟಿಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡು ಹಾರಿಸಿದ್ದಾರೆ. ಈ ಹತ್ಯೆಯ ಹಿಂದೆ ಸ್ಥಳೀಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಆರೋಪವನ್ನು ನಿರಾಕರಿಸಿದ ಬಿಜೆಪಿ, ಟಿಎಂಸಿಯಲ್ಲಿನ “ಆಂತರಿಕ ದ್ವೇಷ” ದಿಂದ ಕೊಲೆ ನಡೆದಿದೆ , ಟಿಎಂಸಿ ಪಾನಿಹಟಿ ಪುರಸಭೆಯನ್ನು ಗೆದ್ದಿದೆ. ಅಲ್ಲಿ ಬಿಜೆಪಿಯ ಅಸ್ತಿತ್ವವೇ ಇಲ್ಲ. ಈ ಘಟನೆ ಅವರ ಆಂತರಿಕ ದ್ವೇಷದ ಫಲವಾಗಿದೆ ಎಂದು ಆರೋಪಿಸಿದೆ.

ಪುರುಲಿಯಾ ಜಿಲ್ಲೆಯ ಝಲ್ಡಾ ಮುನ್ಸಿಪಾಲಿಟಿಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದ ತಪನ್ ಕಂದು ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೌನ್ಸಿಲರ್ ಅವರು ತಮ್ಮ ವಾರ್ಡ್ ಸಂಖ್ಯೆ 2ರ ನಿವಾಸದ ಬಳಿ ಸಂಜೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ್ದಾರೆ

ಆಡಳಿತಾರೂಢ ಟಿಎಂಸಿ ತಪನ್ ಕಂದು ಅವರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲೆಯಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ

Leave a Reply

Your email address will not be published. Required fields are marked *

You may have missed

error: Content is protected !!