August 21, 2026

ಮುಖಾಮುಖಿಯಾದ ಸಿ.ಎಂ ಇಬ್ರಾಹಿಂ, ವಿಪಕ್ಷ ನಾಯಕ ಸಿದ್ದರಾಮಯ್ಯ

0
image_editor_output_image559121928-1647250016037.jpg

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವ ಸಿ.ಎಂ ಇಬ್ರಾಹಿಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಮುಖಾಮುಖಿಯಾದರು.

ಸಿಎಂ ಇಬ್ರಾಹಿಂರನ್ನು ನೋಡುತ್ತಿದ್ದಂತೆ ನಿಂತು ಮಾತನ್ನಾಡಿಸಿದ ‌ಸಿದ್ದರಾಮಯ್ಯ, “ಮಾ.31ರಂದು ಮನೆಗೆ ಬರುತ್ತೇನೆ ಸುಮ್ಮನಿರು” ಎಂದರು. ಅದಕ್ಕೆ ಇಬ್ರಾಹಿಂ, “ಯಾವಾಗ ಹೇಳಿದ್ರಿ ನೀವು?” ಎಂದು ಪ್ರಶ್ನಿಸಿದರು. ‘ಬಾಷಾಗೆ ಹೇಳಿದ್ದೇನೆ.. ಮನೆಗೆ ಬರುತ್ತೇನೆ ಅಂತಾ ಹೇಳಿದ್ದೇನೆ ಇರೋ” ಎಂದು ಸಿದ್ದರಾಮಯ್ಯ ಹೇಳಿದರು.

“ಲೇ ಇರೋ.. ಆತುರ ಮಾಡಬೇಡ, ಸುಮ್ಮನೆ ಇರು.. ಹೇಳಿದಷ್ಟು ಕೇಳು” ಎಂದ ಸಿದ್ದರಾಮಯ್ಯ ಕೋಪದಲ್ಲೇ ತೆರಳಿದರು.

Leave a Reply

Your email address will not be published. Required fields are marked *

You may have missed

error: Content is protected !!