February 3, 2026

ಕಾರ್ಮಿಕರಿಗೆ ವಿತರಿಸಲು ಸರ್ಕಾರದಿಂದ ಬಿಡುಗಡೆಯಾಗಿದ್ದ ಸಲಕರಣೆಗಳು ಕಾಂಗ್ರೆಸ್ ಮುಖಂಡನ ಗೋದಾಮಿನಲ್ಲಿ ಪತ್ತೆ

0
image_editor_output_image-1709134144-1647075008001.jpg

ಕೋಲಾರ: ಜಿಲ್ಲೆಯ ಕಾರ್ಮಿಕರಿಗೆ ವಿತರಿಸಲು ಸರ್ಕಾರದಿಂದ ಬಿಡುಗಡೆಯಾಗಿದ್ದ ಸಲಕರಣೆಗಳು ಖಾಸಗಿ ವ್ಯಕ್ತಿಯ ಗೋದಾಮಿನಲ್ಲಿ ಪತ್ತೆಯಾಗಿದೆ.

ಬಂಗಾರಪೇಟೆ ಪಟ್ಟಣದ ಕಾರ್ಮಿಕ ಇಲಾಖೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ನೀಡಲು ಸಲಕರಣೆಗಳ ಕಿಟ್ ಗಳು ಕಾರ್ಮಿಕರಿಗೆ ವಿತರಣೆ ಮಾಡದೆ ಅಕ್ರಮವಾಗಿ ಕಾಂಗ್ರೆಸ್ ಮುಖಂಡರಿಗೆ ಸೇರಿದ ಗೋದಾಮಿನಲ್ಲಿ ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಕಾರ್ಮಿಕ ಇಲಾಖೆಯಲ್ಲಿ ಏಜೆಂಟ್ ಆಗಿರುವ ಭರತ್ ಎಂಬುವವರಿಗೆ ಸೇರಿದ ಗೋಡೌನ್ ನಲ್ಲಿ ಕಾರ್ಮಿಕರ ಸಲಕರಣೆಗುಳ ಬಚ್ಚಿಟ್ಟದ್ದನ್ನು ಪತ್ತೆ ಹಚ್ಚಲಾಗಿದೆ.

ಬಂಗಾರಪೇಟೆ ಪೊಲೀಸರು ಭರತ್ ಎಂಬವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಲೂಕು ಕಾರ್ಮಿಕ ಅಧಿಕಾರಿ ರೇಣುಕಾಪ್ರಸಾದ್ ನೇರ ಶಾಮೀಲಾಗಿದ್ದು ವಿಚಾರ ಬಯಲಾದ ಬಳಿಕ ನಾಪತ್ತೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!